ಅನುಷ್ಠಾನಗೊಳ್ಳಲಿವೆ 6 ಮೆಗಾ ಇಂಡಸ್ಟ್ರಿಯಲ್ ಪ್ರಾಜೆಕ್ಟ್‌ಗಳು

CTD 22 UDDIMEDARARU--01
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಎರಡು-ಮೂರು ವರ್ಷಗಳ ಒಳಗೆ ಬೃಹತ್ ಕೈಗಾರಿಕೆಗಳು ಕಾರ‌್ಯಾರಂಭ ಮಾಡಲಿವೆ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ ಹೇಳಿದರು.
ರಾಜ್ಯಹಣಕಾಸು ಸಂಸ್ಥೆ ಶಿವಮೊಗ್ಗ ಮತ್ತು ಚಿತ್ರದುರ್ಗ ಶಾಖಾ ಕಚೇರಿ ಆಶ್ರಯದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಉದ್ದಿಮೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಐದಾರು ಮೆಗಾ ಪ್ರಾಜೆಕ್ಟ್‌ಗಳು ತಲೆ ಎತ್ತಲಿದ್ದು,ಕೆಲ ವೇ ವರ್ಷಗಳಲ್ಲಿ ಚಿತ್ರದುರ್ಗ,ರಾಜ್ಯದ ಅತ್ಯುತ್ತಮ ಕೈಗಾರಿಕೆಗಳ ವಲಯಗಳಲ್ಲಿ ಒಂದಾಗಲಿದೆ.
ಜಿಂದಾಲ್,ಕಿರ್ಲೋಸ್ಕರ್ ಮತ್ತಿತರ ಬೃಹತ್ ಕೈಗಾರಿಕಾ ಕಂಪನಿಗಳು ಸಾವಿರಾರು ಕೋಟಿ ರೂ.ಹೂಡಿಕೆಗೆ ಸಜ್ಜಾಗುತ್ತಿವೆ.ಹಿರಿಯೂ ರು,ಚಿತ್ರದುರ್ಗ,ಚಳ್ಳಕೆರೆ ತಾಲೂಕು ಸಹಿತ ಜಿಲ್ಲೆ ವಿವಿಧೆಡೆ ಸ್ಥಾಪನೆ ಆಗುತ್ತಿರುವ ಈ ಬೃಹತ್ ಕೈಗಾರಿಕೆಗಳು,ಸಣ್ಣ,ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೂ ಪೂರಕವಾಗಲಿವೆ.
ಕೆಎಐಡಿಬಿಯಿಂದ ಹಿರಿಯೂರು ತಾಲೂಕು ಮೇಟಿಕುರ್ಕೆ ಬಳಿ 1194 ಎಕರೆ ಇಂಡಸ್ಟ್ರೀಯಲ್ ಕಾರಿಡಾರ್ ನಿರ್ಮಾಣಕ್ಕಾಗಿ ಟೆಂಡ ರ್ ಕರೆಯಲಾಗಿದೆ. ಚಳ್ಳಕೆರೆ ತಾಲೂಕು ದೊಡ್ಡುಳಾರ್ತಿ ಬಳಿ ಕೆಎಸ್‌ಎಸ್‌ಐಡಿಸಿ 125 ಎಕರೆ ಇಂಡಸ್ಟ್ರಿಯಲ್ ಏರಿಯಾವನ್ನು ಅಭಿವೃದ್ಧಿ ಪ ಡಿಸಿದೆ. ಇನ್ನೂ 125 ಎಕರೆ ಜಮೀನನ್ನು ಕೆಎಐಡಿಬಿ ಅಭಿವೃದ್ಧಿ ಪಡಿಸಲಿದೆ.
ಕೆಎಸ್‌ಎಸ್‌ಐಡಿಸಿ ಲೇಔಟ್ ದರ ಕಡಿತಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯಸರ್ಕಾರದ ಹೊಸ ಕೈಗಾರಿಕೆ ನೀತಿ ಜಾರಿಯಾ ದರೆ,ಕೆಐಎಡಿಬಿಯಲ್ಲಿ ಪರಿಶಿಷ್ಟ ಜಾತಿ,ವರ್ಗದ ಉದ್ದಿಮೆದಾರರಿಗೆ ಕೈಗಾರಿಕೆ ನಿವೇಶನ ಖರೀದಿಯಲ್ಲಿ ದೊರಕುತ್ತಿರುವ ಶೇ.75 ರಿಯಾ ಯಿತಿ ಸೌಲಭ್ಯ,ಸಾಮಾನ್ಯ ಉದ್ದಿಮೆದಾರಿಗೂ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಹಿಂದುಳಿದ ತಾಲೂ ಕುಗಳ ಪಟ್ಟಿ ಗೆ ಸೇರಿಸಿದರೆ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ನೆರವು ಸಿಗಲಿದೆ.
ತುಮಕೂರಲ್ಲಿ 10ಸಾವಿರ ಎಕರೆ ಹಾಗೂ ಶಿರಾದಲ್ಲಿ 1ಸಾವಿರ ಎಕರೆ ಪ್ರದೇಶದಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಅಭಿವೃದ್ಧಿ ಆಗುತ್ತಿದೆ. 50 ಸಾವಿರ ಕೋಟಿ ರೂ.ವೆಚ್ಚದಲ್ಲಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಕಾರಿಡಾರ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ ಎಂದರು.
ಸಮಾವೇಶ ಉದ್ಘಾಟಿಸಿದ ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ತಳವಾರ್ ಮಾತನಾಡಿ,ಜಿಲ್ಲೆಯಲ್ಲಿ 50 ಕೈಮಗ್ಗ ಸೊಸೈಟಿಗಳಿವೆ. 25 ವಿದ್ಯುತ್ ಚಾಲಿತ ಕೈಮಗ್ಗ ಘಟಕಗಳಿದ್ದು,76 ಕೋಟಿ ರೂ.ಜವಳಿ ಕೇತ್ರದಲ್ಲಿ ಹೂಡಿಕೆಯಾಗಿದೆ. ಹಿರಿಯೂರು ಬಳಿ 27 ಕೋಟಿ ರೂ.ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾಗಿದೆ.
ರಾಜ್ಯಸರ್ಕಾರ ಸುವರ್ಣವಸ್ತ್ರ ನೀತಿ,ನೂತನ ಜವಳಿ ನೀತಿ ಹಾಗೂ ಸಿದ್ದ ಉಡುಪು ನೀತಿ ಅನುಷ್ಠಾನ ನೀತಿಗಳನ್ನು ಜಾರಿಗೊಳಿಸಿದೆ ಎಂ ದ ಅವರು,ಉದ್ದಿಮೆದಾರರಿಗೆ ಇಲಾಖೆ ಸವಲತ್ತುಗಳ ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಕೆ.ಮಲ್ಲಿಕಾ ರ್ಜುನ,ಮಧ್ಯವರ್ತಿಗಳ ನೆರವಿಲ್ಲದೆ ಶಾಖಾ ವ್ಯಸ್ಥಾಪಕರನ್ನು ನೇರ ಭೇಟಿ ಮಾಡಿ,ಉದ್ಯಮಗಳ ಸ್ಥಾಪನೆಗೆ ಹಣಕಾಸು ನೆರವು ಪಡೆಯು ವಂತೆ ಉದ್ದಿಮೆದಾರರಿಗೆ ಸೂಚಿಸಿದರು.
ಉದ್ದಿಮೆದಾರರೊಂದಿಗೆ ಅಧಿಕಾರಿಗಳು ಸಂವಾದ ನಡೆಸಿದರು. ಸಂಸ್ಥೆ ಶಿವಮೊಗ್ಗ ಶಾಖಾ ವ್ಯವಸ್ಥಾಪಕ ಕೆ.ಎನ್.ಲಿಂಗಪ್ಪ,ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಆರ್.ಬಾಬು,ಉಪ ವ್ಯವಸ್ಥಾಪಕ ಸತ್ಯನಾರಾಯಣ ಮತ್ತಿತರರು ಇದ್ದರು.

(ಸಿಟಿಡಿ 22 ಉದ್ದಿಮೆದಾರರು)
ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಉದ್ದಿಮೆದಾರರ ಸಮಾವೇಶವನ್ನು ಜವಳಿ ಮತ್ತು ಕೈಮಗ್ಗ ಇಲಾಖೆ ಡಿಡಿ ಲಕ್ಷ್ಮಣ ತಳ ವಾರ್ ಉದ್ಘಾಟಿಸಿದರು. ಕೆಎಸ್‌ಎಫ್‌ಸಿ ಪ್ರಧಾನ ವ್ಯವಸ್ಥಾಪಕ ಕೆ.ಮಲ್ಲಿಕಾರ್ಜುನ್,ಶಾಖಾ ವ್ಯವಸ್ಥಾಪಕರಾದ ಆರ್.ಬಾಬು,ಕೆ.ಎನ್.ಲಿಂ ಗಪ್ಪ,ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net