

ಹನೂರು: ತಾಲೂಕಿನ ಬಿದರಹಳ್ಳಿ ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ಗೃಹಿಣ ಯೊಬ್ಬಳು ಅನುಮಾಸ್ಪಾದವಾಗಿ ಮೃತಪಟ್ಟಿದ್ದು, ಈ ಬಗ್ಗೆ ಕೊಲೆ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಬಿಡದಿಯ ಶೋಭಾ ಎಂಬಾಕೆಯೇ ಮೃತ ದುರ್ದೈವಿ. ಈಕೆಗೆ ಮೊದಲೇ ವಿವಾಹವಾಗಿದ್ದು, 2 ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷದ ಹಿಂದೆ ಕೆಲಸಕ್ಕಾಗಿ ಬಿಡದಿಗೆ ಆಗಮಿಸಿದ್ದ ಬಿದರಹಳ್ಳಿಯ ಅಮಲದಾಸ್ ನಡುವೆ ಪ್ರೀತಿ ಅಂಕುರವಾಗಿತ್ತು ಎನ್ನಲಾಗಿದೆ. ಹಾಗಾಗಿ ಈಕೆಯನ್ನು ಅಮಲ್‍ದಾಸ್ ಬಿದರಹಳ್ಳಿಗೆ ಕರೆತಂದು ಯಾರ ಅಭ್ಯಂತರವೂ ಇಲ್ಲದೇ ವಾಸಿಸ ತೊಡಗಿದ್ದರು. ಆಗ್ಗಾಗ್ಗೆ ಮನೆಯಲ್ಲಿ ಗಲಾಟೆ ಎನ್ನಲಾಗಿದೆ. ಆದರೆ ಬೆಳಗ್ಗೆ ಶೋಭಾ ಅನುಮಾಸ್ಪಾದವಾಗಿ ಮೃತಪಟ್ಟಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ ಕವಿತಾ ಅವರು ಭೇಟಿ ನೀಡಿ ಪರಿಶೀಲಿಸಿ ಪ್ರಭಾರ ಇನ್ಸ್‍ಪೆಕ್ಟರ್ ಶೇಷಾದ್ರಿ, ಸಬ್ ಇನ್ಸ್‍ಪೆಕ್ಟರ್ ಈಶ್ವರ್ ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದರು. ಸಂಶಯದ ಹಿನ್ನಲೆ ಅಮಲದಾಸ್‍ನನ್ನು ವಶಕ್ಕೆ ಪಡೆದಿರುವ ಪೊಲೀಸರು ಮೃತದೇಹವನ್ನು ಚಾ.ನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.