ಅನುಮಾನಕ್ಕೆ ಎಡೆ ಮಾಡಿದ ಬೆಳೆ ಸರ್ವೇ

01
Published on

ಕೆಂಭಾವಿ : ಕAದಾಯ ಇಲಾಖೆಯಿಂದ ವಲಯದಲ್ಲಿ ಕೈಗೊಂಡ ಆಧುನಿಕ ಬೆಳೆ ಸರ್ವೇ ಕಾರ್ಯ ಹಲವು ಅನುಮಾನ ಹುಟ್ಟು ಹಾಕಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ಬೆಳೆ ಸರ್ವೇ ಕಾರ್ಯಕ್ಕೆ ಕಂಪನಿ ಮೂಲಕ ಗುತ್ತಿಗೆ ನೀಡಿದ್ದು, ಅವರು ಖುದ್ದು ರೈತರ ಜಮೀನಿಗೆ ಭೇಟಿ ನೀಡಿ ಅಲ್ಲಿ ಬೆಳೆದ ಬೆಳೆಗಳನ್ನು ನಿಗದಿತ ತಂತ್ರಾAಶದಲ್ಲಿ ನಮೂದಿಸುತ್ತಾರೆ. ಆದರೆ ಕೆಂಭಾವಿ ವಲಯದಲ್ಲಿ ಕೈಗೊಂಡ ಈ ಸರ್ವೇ ತಂತ್ರಾAಶ ಕಾರ್ಯದಲ್ಲಿ ಹಲವು ಗೊಂದಲಗಳಿದ್ದು, ಒಣ ಬೇಸಾಯ ಪದ್ಧತಿಯ ರೈತರ ಜಮೀನುಗಳಲ್ಲಿ ಪ್ರಸ್ತುತ ಬೆಳೆಗಳ ಮಾಹಿತಿ ನೀಡದೆ ನಿಷೇಧಿತ ಬೆಳೆಗಳಾದ ಭತ್ತ, ಕಬ್ಬು, ಮೆಣಸಿನಕಾಯಿ ಬೆಳೆಗಳ ಬಗ್ಗೆ ಮಾಹಿತಿ ನೀಡಿದ್ದರಿಂದ ರೈತರು ಕಂಗಾಲಾಗುವAತಾಗಿದೆ.

ಈ ಬಾರಿ ತೀವ್ರ ಬರಗಾಲದ ನಡುವೆಯೂ ಮಳೆಯಾಧಾರಿತ ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ ಬಿತ್ತನೆ ಮಾಡಿದ್ದು, ಈಗಾಗಲೇ ಸೂರ್ಯಕಾಂತಿ, ಸೆಜ್ಜೆ ಬೆಳೆಗಳು ನೆಲಕಚ್ಚಿದೆ. ಅಲ್ಪಸ್ವಲ್ಪ ಉಳಿದ ಹತ್ತಿ, ತೊಗರಿಯನ್ನು ರಕ್ಷಿಸಲು ಮತ್ತು ನಾಶವಾದ ಬೆಳೆಗಳಿಗೆ ಪರಿಹಾರ ಕಂಡುಕೊಳ್ಳಲು ರೈತರು ಪ್ರಯತ್ನಿಸುತ್ತಿದ್ದಾರೆ. ಆದರೆ ರೈತರ ಗಮನಕ್ಕೆ ಬಾರದೆ ಸರ್ವೇ ಕಾರ್ಯ ಕೈಗೊಳ್ಳುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.

ವಲಯದಲ್ಲಿ ಹದಿನೈದು ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ಒಣ ಬೇಸಾಯದಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಹತ್ತಿ ಬಿತ್ತನೆ ಮಾಡಿದ ಜಮೀನಿನಲ್ಲಿ ಭತ್ತ, ತೊಗರಿ ಬಿತ್ತನೆ ಮಾಡಿದ ಜಮೀನಿನಲ್ಲಿ ಮೆಣಸಿನಕಾಯಿ ಹೀಗೆ ಹತ್ತು ಹಲವು ಎಡವಟ್ಟು ಮಾಡಿದ್ದು, ಆದಷ್ಟು ಬೇಗ ಈ ತಂತ್ರಾAಶ ಪರಿಷ್ಕರಿಸಿ ಮತ್ತೊಮ್ಮೆ ಸರ್ವೇ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net