

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಪೂರ್ವಾನುಮತಿ ಪಡೆಯದೆ ಹಾಗೂ ಕರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸದೆ ಲಸಿಕೆ ಹಾಕುತ್ತಿದ್ದ ಖಾಸಗಿ ಸಂಸ್ಥೆ ಮೇಲೆ ದಾಳಿ ನಡೆಸಿದ ತಹಸೀಲ್ದಾರ್ ಹಾಗೂ ಆರೋಗ್ಯಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಸಂತೋಷ ಫೌಂಡೇಷನ್ ಎಂಬ ಖಾಸಗಿ ಸಂಸ್ಥೆ ಸಾರ್ವಜನಿಕರಿಗೆ ಕರೊನಾ ಲಸಿಕೆ ವಿತರಣೆ ನೆಪದಲ್ಲಿ ಕರೊನಾ ನೀತಿ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಶುಕ್ರವಾರ ಲಸಿಕೆ ವಿತರಣೆ ಮಾಡುವುದಾಗಿ ಹೇಳಿ 150 ಮಂದಿಗೆ ಟೋಕನ್ ನೀಡಿದೆ. ಆದರೆ ಲಸಿಕೆ ವಿತರಣೆಗೆ ತಾಲೂಕು ಆಡಳಿತ, ತಾಲೂಕು ವೈದ್ಯಾಧಿಕಾರಿ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದಿರುವುದು ಅಚ್ಚರಿಗೆ ಕಾರಣವಾಗಿದೆ. ಯಾವುದೇ ಅಧಿಕಾರಿಗಳಿಗೆ ಕನಿಷ್ಠ ಮಾಹಿತಿಯನ್ನೂ ನೀಡದೆ ಲಸಿಕೆ ವಿತರಣೆ ಮಾಡಿದ್ದಾರೆ. ನಗರ ವ್ಯಾಪ್ತಿಯಲ್ಲಿ ಸೋಂಕು ಹೆಚ್ಚಾಗಿದ್ದರೂ, ಇಲ್ಲಿ ಲಸಿಕೆ ಪಡೆಯಲು ಬರುವವರು ಪರಸ್ಪರ ಅಂತರ ಮರೆತು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಅಭಿಯಾನದ ಸ್ಥಳಕ್ಕೆ ತಹಸೀಲ್ದಾರ್ ಟಿ.ಎಸ್. ಶಿವರಾಜ್, ತಾಲೂಕು ವೈದ್ಯಾಧಿಕಾರಿ ಡಾ. ಪರಮೇಶ್ವರ, ಪಿಎಸ್‌ಐ ಗೋವಿಂದ ಅವರು ಶುಕ್ರವಾರ ದಾಳಿ ನಡೆಸಿ ೌಂಡೇಷನ್ ಪದಾಧಿಕಾರಿಗಳಿಗೆ ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿದರು.
ಲಸಿಕೆ ಯಾವುದು ಎಂಬ ಮಾಹಿತಿ ಇಲ್ಲ: ಕರೊನಾ ಸೋಂಕು ತಡೆಗಟ್ಟಲು ಸರ್ಕಾರ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ಲಸಿಕೆಗಳ ಬಳಕೆಗೆ ಅನುಮತಿ ನೀಡಿದೆ. ಆದರೆ, ಸಂತೋಷ ೌಂಡೇಷನ್ ಅಭಿಯಾನದಲ್ಲಿ ಯಾವ ಲಸಿಕೆ ಕೊಡುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ. ಸರ್ಕಾರ ನಡೆಸುತ್ತಿರುವ ಲಸಿಕಾ ಅಭಿಯಾನದಲ್ಲೇ ಕರೊನಾ ಲಸಿಕೆಗಳ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಲಸಿಕೆ ಸಿಗುತ್ತಿಲ್ಲ. ಹೀಗಿರುವಾಗ ಖಾಸಗಿ ಸಂಸ್ಥೆಯೊಂದಕ್ಕೆ ಲಸಿಕೆಗಳು ಎಲ್ಲಿಂದ, ಹೇಗೆ ಲಭ್ಯವಾದವು ಎಂಬುದು ಅನುಮಾನಗಳಿಗೆ ಕಾರಣವಾಗಿದೆ.
ಸಂತೋಷ ಫೌಂಡೇಷನ್ ಅವರಿಗೆ ಲಸಿಕೆ ಕೊಟ್ಟವರು ಯಾರು?, ಇಷ್ಟೊಂದು ಲಸಿಕೆ ಹೇಗೆ ಸಿಕ್ಕಿತು ಎಂಬುದು ಸ್ಪಷ್ಟವಾಗಿಲ್ಲ. ಲಸಿಕೆ ವಿತರಣೆಗೆ ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಅನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ. ತಾಲೂಕು ವೈದ್ಯಾಧಿಕಾರಿಗಳಿಂದ ವರದಿ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅರುಳ್ ಕುಮಾರ್, ಉಪವಿಭಾಗಾಧಿಕಾರಿ ಯಾವುದೇ ಅನುಮತಿ ಇಲ್ಲದೆ ಲಸಿಕೆ ಕೊಡುತ್ತಿರುವ ಮಾಹಿತಿ ಸಿಗುತ್ತಲೇ ತಾಲೂಕು ವೈದ್ಯಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕರೊನಾ ಮಾರ್ಗಸೂಚಿ ಉಲ್ಲಂಘಿಸುತ್ತಿರುವುದು ಸ್ಪಷ್ಟವಾಗಿದೆ. ಸ್ಥಳದಲ್ಲೇ ನೋಟಿಸ್ ಜಾರಿ ಮಾಡಲಾಗಿದೆ. ಟಿ.ಎಸ್.ಶಿವರಾಜ್, ತಹಸೀಲ್ದಾರ್ ತಾಲೂಕು ಆರೋಗ್ಯ ಇಲಾಖೆಯಿಂದಲೂ ಅನುಮತಿ ಪಡೆದಿಲ್ಲ. ಸಾರ್ವಜನಿಕರಿಗೆ ಕೋವಿಶೀಲ್ಡ್ ವ್ಯಾಕ್ಸಿನ್ ನೀಡಿರುವ ಮಾಹಿತಿ ಇದೆ. ಸಂತೋಷ್ ಫೌಂಡೇಷನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗ್ರಾಮಾಂತರ ಠಾಣೆ ಹಾಗೂ ತಹಸೀಲ್ದಾರ್‌ಗೆ ದೂರು ನೀಡಿದ್ದೇನೆ. ಡಾ.ಪರಮೇಶ್ವರ, ತಾಲೂಕು ವೈದ್ಯಾಧಿಕಾರಿ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ ಲಸಿಕೆ ವಿತರಣೆ ಮಾಡಿದ್ದೇವು. ಆದರಂತೆಯೇ ಇಲ್ಲಿಯೂ ಲಸಿಕೆ ವಿತರಣೆ ಮಾಡುತ್ತಿದ್ದೇವು. ಸ್ಥಳೀಯ ಆಡಳಿತ, ತಾಲೂಕು ವೈದ್ಯಾಧಿಕಾರಿಗಳಿಂದ ಅನುಮತಿ ಪಡೆಯಬೇಕೆಂಬ ಮಾಹಿತಿ ಕೊರತೆಯಿಂದ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿ ಅನುಮತಿ ಪಡೆದು ನಿಯಮ ಪಾಲಿಸಿ ಸಾರ್ವಜನಿಕರಿಗೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎನ್.ಎಂ. ಸಂತೋಷ ಕುಮಾರ್ ಸಂಸ್ಥಾಪಕ, ಸಂತೋಷ ಫೌಂಡೇಷನ್