ಅನುಭವಮಂಟಪ ಪುರಸ್ಕಾರಕ್ಕೆ ಎಸ್.ಸೋಮನಾಥ ಆಯ್ಕೆ

S_Somnath
Published on

ಬಸವಕಲ್ಯಾಣ: ವಿಶ್ವಬಸವ ಧರ್ಮ ಟ್ರಸ್ಟ್ ಅನುಭವಮಂಟಪದಿಂದ ಅನುಭವಮಂಟಪ ರಾಷ್ಟ್ರೀಯ ಪುರಸ್ಕಾರಕ್ಕೆ ಇಸ್ರೋ ಸಂಸ್ಥೆ ಅಧ್ಯಕ್ಷ ಎಸ್.ಸೋಮನಾಥ ಅವರನ್ನು ಆಯ್ಕೆ ಮಾಡಲಾಗಿದೆ. ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನೊಳಗೊಂಡಿದೆ.

ಅನುಭವ ಮಂಟಪ ಪರಿಸರದಲ್ಲಿ ನ.೨೫ ಮತ್ತು ೨೬ರಂದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ನಡೆಯಲಿರುವ ೪೪ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವದದಲ್ಲಿ ೨೬ರಂದು ಎಸ್.ಸೋಮನಾಥ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಇಸ್ರೋ ಅಧ್ಯಕ್ಷ ಶ್ರೀಧರ್ ಪಣೀಕ್ಕರ್ ಸೋಮನಾಥ ಅವರು ಭಾರತೀಯ ಬಾಹ್ಯಾಕಾಶ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅಧ್ಯಕ್ಷತೆಯಲ್ಲಿ ಇಸ್ರೋ ಸಂಸ್ಥೆ ಚಂದ್ರಯಾನ ೩ ಉಪಗ್ರಹ ಉಡಾವಣೆ ಮಾಡಿತ್ತು. ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸುವ ಪ್ರಪಂಚದ ಪ್ರಪ್ರಥಮ ಉಪಗ್ರಹ ಹಾಗೂ ಚಂದ್ರನಲ್ಲಿ ನಯವಾಗಿ ಭೂಸ್ಪರ್ಶ ಮಾಡುವ ನಾಲ್ಕನೇ ಸಫಲಕಾರಿಯಾಗಲು ಸೋಮನಾಥ ಶ್ರಮವೂ ಅಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net