

ಚಿತ್ರದುರ್ಗ: ಮಧ್ಯಕರ್ನಾಟಕದ ದಸರಾ ಎಂದೇ ಖ್ಯಾತಿ ಪಡೆದ ಶರಣ ಸಂಸ್ಕೃತಿ ಉತ್ಸವ,ಸಾಂಸ್ಕೃತಿಕ ಸಂಭ್ರಮವನ್ನು ನಾವಿಂದು ನಗರದಲ್ಲಿ ನೋ ಡುತ್ತಿದ್ದೇವೆ ಎಂದರೆ ಅದಕ್ಕೆ ಮುರುಘಾಮಠ ಕಾರಣವೆಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ಬುಧವಾರ ಆಯೋಜಿಸಿದ್ದ ಜಾನಪದ ಸಮಾವೇಶ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಶಾಲಾ,ಕಾಲೇಜುಗಳ ನಿವೃ ತ್ತ ನೌಕರರ ಸಮಾಗಮ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಚಿಕ್ಕವರಿದ್ದಾಗ ದಸರೆ ನೋಡಲು ಮೈಸೂರಿಗೆ ಹೋಗುವುದು ದೊಡ್ಡ ವಿಷಯವಾಗಿತ್ತು.ಆದರೆ ಇಂದು ಚಿತ್ರದುರ್ಗ ಮಧ್ಯ ಕ ರ್ನಾಟಕದ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ರಚಿಸಿದ ಅನುಭವ ಮಂಟಪವೇ ಇಂದಿನ ಪಾ ರ್ಲಿಮೆಂಟ್ ಆಗಿದೆ. ಬರಗಾಲ ಪೀಡಿತ ಪ್ರದೇಶದಲ್ಲಿ ಅನ್ನ,ಅಕ್ಷರ ದಾಸೋಹ ನೀಡುತ್ತಿರುವ ಶ್ರೀ ಮಠ ಬಸವತತ್ತ್ವದೊಂದಿಗೆ ಸಾಗುತ್ತಿದೆ ಎಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ,ಬನಹಟ್ಟಿ ನಿವೃತ್ತ ಪ್ರಾಚಾರ‌್ಯ ಬಿ.ಆರ್.ಪೊಲೀಸ್‌ಪಾಟೀ ಲ್,ಬಾಪೂಜಿ ಸಂಸ್ಥೆಯ ಕೆ.ಎಂ.ವೀರೇಶ್,ನಿವೃತ್ತ ನೌಕರ ಸಿ.ಎಂ ಧರ್ಮಪ್ಪ ಮಾತನಾಡಿದರು.ರಾವಂದೂರು ಶ್ರೀ ವಿರಕ್ತ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಪಟೇಲ್‌ಶಿವಕುಮಾರ್,ಡಿ.ಎಸ್.ಸುರೇಶ್‌ಬಾಬು ಇತರರು ಇದ್ದರು. ಜಮುರಾ ಕಲಾವಿ ದರು ಪ್ರಾರ್ಥಿಸಿದರು.ಎಸ್.ಎಂ.ಕೊಟ್ರೇಶ್ ಸ್ವಾಗತಿಸಿ,ಟಿ.ಪಿ ಜ್ಞಾನಮೂರ್ತಿ ನಿರೂಪಿಸಿ ವಂದಿಸಿದರು.ಚಿತ್ರದುರ್ಗದ ಅಂಜನಾ ನೃತ್ಯ ಕ ಲಾ ಕೇಂದ್ರ,ನಾಟ್ಯರಂಜನಿ ನೃತ್ಯ ಕೇಂದ್ರ ಹಾಗೂ ರಂಗಭಂಡಾರ ಕಲಾಸಂಘದ ಕಲಾವಿದರು ನೃತ್ಯ ರೂಪಕಗಳನ್ನು ನಡೆಸಿಕೊಟ್ಟರು.
ಬಹುಮಾನ ವಿತರಣೆ
ಮುರುಘಾಮಠದಲ್ಲಿ ಬುಧವಾರ ವಚನ ಕಮ್ಮಟ ರ‌್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಏರ್ಪಡಿಸಲಾಗಿತ್ತು. ಸಮ್ಮು ಖ ವಹಿಸಿದ್ದ ಉತ್ತಂಗಿ ಮಹಾಸಂಸ್ಥಾನ ಮಠದ ಶ್ರೀ ಜಗದ್ಗುರು ಸೋಮಶೇಖರ ಸ್ವಾಮೀಜಿ,ಶ್ರೀ ಸೇವಾಲಾಲ್ ಬಂಜಾರ ಗುರು ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹಾಗೂ ಗುಳೇದಗುಡ್ಡ ಬಸವ ಕೇಂದ್ರದ ಅಶೋಕ್ ಬಸಪ್ಪ ಬರಗುಂಡಿ ಮಾತನಾಡಿದರು. ಗುರು ಮಠಕಲ್ ಖಾಸಾ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಸಿದ್ಧರಾಮಣ್ಣ ನಡಕಟ್ಟಿ,ಸಿ.ಎಂ.ಚಂದ್ರ ಪ್ಪ,ವಚನಕಮ್ಮಟ ನಿರ್ದೇಶಕ ವೀರಭದ್ರಪ್ಪ ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.ಪುಷ್ಪವಲ್ಲಿ ಸ್ವಾಗತಿಸಿ,ನೇತ್ರಾವತಿ ನಿರೂಪಿಸಿ ದರು.ಶಿವಲೀಲಾ ವಂದಿಸಿದರು.
ರ‌್ಯಾಂಕ್ ಪಡೆದವರ ವಿವರ
5ನೇ ತರಗತಿ ವಿಭಾಗ-ಕಾವೇರಿ ಮೂಲಿಮಠ(ಪ್ರ),ಸಾಗರ ಹೊನ್ನನಾಯಕ(ದ್ವಿ),ಜೆ.ಆರ್.ವರ್ಷಾ(ತೃ),6ನೇ ತರಗತಿ- ಪಿ.ಆರ್. ಬೃಂದಾ(ಪ್ರ),ಸೃಷ್ಟಿ ಸಂಪತ್ತಕುಮಾರ(ದ್ವಿ),ನವೀನ್‌ಕುಮಾರ್(ತೃ),7ನೇ ತರಗತಿ- ಪ್ರತಿಕ್ಷಾ ಕೆ.ರಂಗಪುರ(ಪ್ರ),ಕಲ್ಪನಾ ಶಿವಾಳಮ್ಮನವರ (ದ್ವಿ),ಬಿ.ಎಸ್.ಶಶಿಕಲಾ(ತೃ)8ನೇ ತರಗತಿ-ದೀಪಿಕಾ.ಬಿ.ಪಾಟೀಲ್(ಪ್ರ),ಎಂ.ವೈ.ದೀಪಾ(ದ್ವಿ),ಯಲ್ಲಮ್ಮ(ತೃ).9ನೇ ತರಗತಿ-ಅಂಕಿತಾ ನಾಗೇಂದ್ರ(ಪ್ರ),ಶೋಭಾ(ದ್ವಿ),ಪ್ರವೀಣ್ ಹುಬ್ಬಳ್ಳಿ(ತೃ),10ನೇ ತರಗತಿ-ಎನ್.ಸಂಗೀತ(ಪ್ರ),ಕೆ.ಹಾಸಿನಿ(ದ್ವಿ),ಎಚ್.ಸಿಂಧು(ತೃ).
ಪ್ರಥಮ ಪಿಯುಸಿ-ಚೆನ್ನಮ್ಮ ಆರ್.ಕಟುವಾಣಿ(ಪ್ರ),ಅಕ್ಷತಾ ಎಸ್.ಬಡಗನ್ನಪ್ಪನವರ(ದ್ವಿ),ಶ್ವೇತಾ ನಿಂಗೋಜಿ(ತೃ).ದ್ವಿತೀಯ ಪಿಯು ಸಿ-ರಂಗಸ್ವಾಮಿ(ಪ್ರ),ಪ್ರೇಮ್‌ಕುಮಾರ್‌ಜೋಗಿ(ದ್ವಿ),ಎಸ್.ಅಚಿತಾ(ತೃ). ಪ್ರಥಮ ಪದವಿ-ಸಂಗೀತ ಹಳ್ಳೂರ(ಪ್ರ),ಎನ್.ಐಶ್ವರ್ಯ( (ದ್ವಿ),ಎಂ.ಎಸ್.ಪೂರ್ಣಿಮಾ(ತೃ),ದ್ವಿತೀಯ ಪದವಿ-ಡಿ.ಜಿ.ಲಹರಿ(ಪ್ರ),ಸಾಕ್ಷಿ(ದ್ವಿ),ನಾಗಶ್ರೀ ಭಟ್(ತೃ),ತೃತೀಯ ಪದವಿ- ಸಚಿನ್. ಎಲ್ ಬಿರಾದಾರ(ಪ್ರ),ಪಿ.ರಕ್ಷಿತಾ(ದ್ವಿ),ರಚಿತಾ ಶಿವಕ್ಕನವರ್(ತೃ).
--
ಇಷ್ಟ ಲಿಂಗ ಪೂಜಿಸುವವರೇ ಶಿವಯೋಗಿಗಳು
ನಿತ್ಯ ಇಷ್ಟಲಿಂಗ ಪೂಜೆ ಮಾಡುವವರೇ ಶಿವಯೋಗಿಗಳೆಂದು ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿ ದರು. ಮುರುಘಾಮಠದಲ್ಲಿ ಗುರುವಾರ ಸಹಜ ಶಿವಯೋಗದ ಪ್ರಾತ್ಯಕ್ಷೆಯಲ್ಲಿ ಮಾತನಾಡಿ,ಇಷ್ಟಲಿಂಗ ರೂಪವಿಲ್ಲದ ನಿರಾಕಾರ.ಇಷ್ಟ ಲಿಂಗ ಪೂಜೆಗೆ ಜಾತಿ,ವರ್ಗ,ಲಿಂಗ ಭೇದವಿಲ್ಲ. ಮನೋಬಲ,ಆತ್ಮಬಲ, ಶರೀರಬಲ ಅಂತಃಶಕ್ತಿ, ಧೈರ್ಯಶಕ್ತಿಗೆ ಶಿವಯೋಗದ ಅಗತ್ಯ ವಿ ದೆ ಎಂದರು. ಡಾ.ಬಸವಕುಮಾರ ಸ್ವಾಮೀಜಿ,ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ,ಐರಾಣಿ ಮನೆಮಠದ ಶ್ರೀ ಗಜದಂಡ ಸ್ವಾಮೀಜಿ,ಹರ ಗುರು ಚರಮೂರ್ತಿಗಳು ಉಪಸ್ಥಿತರಿದ್ದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿಲಾಲ್‌ಬಹದ್ದೂರ್ ಶಾಸ್ತ್ರಿ ಅ ವರ ಜಯಂತಿ ಹಾಗೂ ಶಿವಶರಣರ ಕಲ್ಯಾಣಕ್ರಾಂತಿ ವಿಜಯ ಜಯಂತಿಯನ್ನು ಆಚರಿಸಲಾಯಿತು. ಜಮರಾ ಕಲಾವಿದರು ಪ್ರಾರ್ಥಿಸಿ ದರು. ಸಿ.ಎಂ.ಚಂದ್ರಪ್ಪ ಸ್ವಾಗತಿಸಿ,ಟಿ.ಪಿ.ಜ್ಞಾನಮೂರ್ತಿ ವಂದಿಸಿದರು.
ಫಲಿತಾಂಶ
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಜೋಡೆತ್ತು ದೇಸಿ ತಳಿ ಮತ್ತು ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಐಮಂಗಲದ ವಿನಯ್‌ಕುಮಾರ್(ಪ್ರ)15000 ರೂ,,ಗೊಡಬನಹಾಳ್‌ಕಲ್ಲೇಶ್(ದ್ವಿ)10000 ರೂ. ಹಾಗೂ ಹಿರಿಯೂರಿನ ಕೌಶಿಕ್‌ನಾಯ್ಡು(ತೃ)5000 ರೂ.,ಹಿರಿಯೂರಿನ ಜಿ.ಟಿ.ಮಹೇಶ್ 4ನೇ ಸ್ಥಾನ 4000 ರೂ., ಹಿರಿಯೂರಿನ ಕೌಶಿಕ್‌ನಾಯ್ಡು 5ನೇ ಸ್ಥಾನ 3000 ರೂ.,ಮಲ್ಲಾಪುರ ಗೊಲ್ಲರಹಟ್ಟಿ ಸಣ್ಣಓಬಯ್ಯ 6ನೇ ಸ್ಥಾನ 2000 ರೂ.ಹಾಗೂಬಚ್ಚ ಬೋರನಹಟ್ಟಿಯ ಯೋಗೀಶ್ 7ನೇ ಸ್ಥಾನ 1000 ರೂ.ನಗದು ಪುರ ಸ್ಕಾರದೊಂದಿಗೆ ಪಾರಿತೋಷಕಗಳನ್ನು ಪಡೆದಿದ್ದಾರೆ.
ಶರಣ ಸಂಸ್ಕೃತಿ ಉತ್ಸವದಲ್ಲಿಂದು
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಅ.3ರಂದು ಮುರುಘಾಮಠದಲ್ಲಿ ಬೆಳಗ್ಗೆ 8ಕ್ಕೆ ಸಹಜ ಶಿವಯೋಗ,ಬೆಳಗ್ಗೆ 9.30ಕ್ಕೆ ಶ್ರೀ ಶೂನ್ಯ ಪೀಠೋರಹಣ,11 ಗಂಟೆಗೆ ಧರ್ಮಗುರುಬಸವಣ್ಣ ಮತ್ತು ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮ ಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಜರುಗಲಿದೆ. 11.30ಕ್ಕೆ ಶ್ರೀ ಜಯದೇವ ಜಂಗಿಕುಸ್ತಿ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾ ದಾ ಸೋಹ ಏರ್ಪಡಿಸಲಾಗಿದೆ. ಸಂಜೆ 6ಕ್ಕೆ ಶರಣ ಸಂಸ್ಕೃತಿ ಉತ್ಸವ ಸಮಾರೋಪ ಮತ್ತು ಸಂಗೀತ ಕಾರ‌್ಯಕ್ರಮ ಏರ್ಪಡಿಸಲಾಗಿದೆ. ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಮ್ಮುಖ ವಹಿಸುವರು. ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ್‌ಎಸ್.ಹೊರಟ್ಟಿ,ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಮಾಜಿ ಸಚಿವ ಎಚ್ ಆಂಜನೇಯ,ಮಾಜಿ ಸಂಸದ ಬಿ.ಎಂ ಚಂದ್ರಪ್ಪ ಭಾಗವಹಿಸುವರು.