ಅನುಭವ ಮಂಟಪ ವಿಶ್ವದ ಗಮನ ಸೆಳೆಯುವಂತಾಗಲಿ

Capture
Published on

ಬಸವಕಲ್ಯಾಣ: ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ಪವಿತ್ರ ನೆಲ ಬಸವಕಲ್ಯಾಣದಲ್ಲಿ 612 ಕೋಟಿ ರೂ. ವೆಚ್ಚದ ನೂತನ ಅನುಭವ ಮಂಟಪ ಕಾಮಗಾರಿಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಈ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಸಿದ್ಧವಾಗಿರುವ ಅನುಭವ ಮಂಟಪ ಮಾದರಿ ಶುಕ್ರವಾರ ಅನಾವರಣಗೊಂಡಿತು.

ಡಾ.ಜಯದೇವಿ ತಾಯಿ ಲಿಗಾಡೆ ಸಮಾಧಿ ಹತ್ತಿರದ ಕಟ್ಟಡದಲ್ಲಿ ನಿಮರ್ಿಸಿರುವ ಆಕರ್ಷಕ ಮಾದರಿಯನ್ನು ಪೂಜ್ಯರ ಸಾನ್ನಿಧ್ಯ ಮತ್ತು ಪ್ರಮುಖರ ಸಮ್ಮುಖದಲ್ಲಿ ಶಾಸಕ ಶರಣು ಸಲಗರ ಉದ್ಘಾಟಿಸಿದರು. ಇದಕ್ಕೂ ಮುನ್ನ ಗುರು ಬಸವಣ್ಣನವರ ಭಾವಚಿತ್ರಕ್ಕೆ ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಪೂಜೆ ಸಲ್ಲಿಸಿದರು.

ಶಾಸಕ ಸಲಗರ ಮಾತನಾಡಿ, ವಿಶ್ವಕ್ಕೆ ಸಮಾನತೆ, ಸ್ತ್ರೀ ಸಮಾನತೆ, ಕಾಯಕ-ದಾಸೋಹದಂಥ ಶ್ರೇಷ್ಠ ವಿಚಾರ ನೀಡಿದ ಪ್ರಥಮ ಸಂಸತ್ತು ಅನುಭವ ಮಂಟಪ. ಇಲ್ಲಿ ನಿಮರ್ಾಣವಾಗುತ್ತಿರುವ ನೂತನ ಅನುಭವ ಮಂಟಪ ವಿಶ್ವದ ಜನರ ಗಮನ ಸೆಳೆಯುವಂಥ ಕೇಂದ್ರವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನಿಮರ್ಾಣವಾಗುತ್ತಿರುವ ನೂತನ ಸಂಸತ್ ಭವನ ಮಾದರಿಯಲ್ಲಿ ಕಲ್ಲುಗಳ ಬಳಕೆ ಬಗ್ಗೆ ಅಲ್ಲಿಯವರಿಂದ ಸಲಹೆ ಪಡೆಯಬೇಕು. ದೆಹಲಿ ಅಕ್ಷರ ಧಾಮದಲ್ಲಿರುವಂಥ ವ್ಯವಸ್ಥೆಯ ಕೆಲ ಅಂಶಗಳನ್ನು ಇಲ್ಲೂ ಅಳವಡಿಸಿಕೊಳ್ಳುವ ಕುರಿತು ಪರಿಶೀಲಿಸಬೇಕು ಎಂದರು.

ಅನುಭವ ಮಂಟಪ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಜನರಿಗೆ ನೂತನ ಅನುಭವ ಮಂಟಪ ಹೇಗಿರಲಿದೆ ಎಂಬ ಕಲ್ಪನೆ ಮತ್ತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ಮಾದರಿ ತಯಾರಿಸಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಸುಮಾರು 10 ಕಡೆ ಶರಣ ಸಾಹಿತ್ಯದ ಪುಸ್ತಕಗಳ ಮಳಿಗೆ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹುಲಸೂರು ಶ್ರೀ ಡಾ.ಶಿವಾನಂದ ಸ್ವಾಮೀಜಿ ಹಾಗೂ ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿದರು.

ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಬಸವ ಮಹಾಮನೆಯ ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಬೇಲೂರಿನ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ದೇವರು, ರಾಷ್ಟ್ರೀಯ ಬಸವದಳ ಅಧ್ಯಕ್ಷ ಬಸವರಾಜ ಧನ್ನೂರ, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ಸಾವಿತ್ರಿ ಸಲಗರ, ಬಿಕೆಡಿಬಿ ತಹಸೀಲ್ದಾರ್ ಮೋಸಿನ್, ಬಿಡಿಎ ಅಧ್ಯಕ್ಷ ರಾಜಕುಮಾರ ಬಿರಾದಾರ ಸಿರಗಾಪುರ, ಬಿಡಿಪಿಸಿ ಅಧ್ಯಕ್ಷ ಅನೀಲ ರಗಟೆ, ಉಪಾಧ್ಯಕ್ಷ ಅಶೋಕ ನಾಗರಾಳೆ, ಸಹ ಕಾರ್ಯದಶರ್ಿ ಬಸವರಾಜ ಬಾಲಕಿಲೆ, ಕೋಶಾಧ್ಯಕ್ಷ ಸುಭಾಷ ಹೊಳಕುಂದೆ, ನಿದರ್ೇಶಕ ಬಸ್ಸು ಕೋರಕೆ, ಡಾ.ಮಹೇಶ ಪಾಟೀಲ್, ಶಿವಕುಮಾರ ಬಿರಾದಾರ, ಅರವಿಂದ ಮುತ್ತೆ, ಸಿದ್ದು ಬಿರಾದಾರ, ಬಾಬಾಸಾಹೇಬ್ ಗಡ್ಡೆ, ಮಹಾದೇವಪ್ಪ ಇಜಾರೆ ಇತರರಿದ್ದರು.

ಅಕ್ಷರ ಧಾಮದಂತೆ ನಿಮರ್ಾಣವಾಗಲಿ: ನೂತನ ಅನುಭವ ಮಂಟಪ ನಿಮರ್ಾಣ ಆಗುತ್ತಿರುವುದು ಬಸವಾಭಿಮಾನಿಗಳಲ್ಲಿ ಬಹಳ ವರ್ಷದ ಕನಸು ನನಸಾಗುವಂತೆ ಮಾಡಿದೆ. 12ನೇ ಶತಮಾನದ ಕಲ್ಯಾಣ ರಾಜ್ಯದ ವೈಭವ ಮರುಕಳಿಸುವ ಕಾಲ ಒದಗಿಬಂದಿದೆ. ಹೀಗಾಗಿ ಈ ಅನುಭವ ಮಂಟಪ ಆಕರ್ಷಣೀಯ ತಾಣವಾಗಿ ಹೊರಹೊಮ್ಮಲಿ. ಇದು ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ನಿಮರ್ಾಣವಾಗಲಿ ಎಂದು ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸದಾಶಯ ವ್ಯಕ್ತಪಡಿಸಿದರು. ಸಕರ್ಾರ ಅನುದಾನ ಒದಗಿಸಿದ್ದು, ಕಟ್ಟಡ ಆಕರ್ಷಣೀಯವಾಗಿಸಲು ಸಂಬಂಧಿತರು ಯೋಚಿಸಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಆವರಿಂದಲೇ ಲೋಕಾರ್ಪಣೆ ಆಗಲಿ ಎಂದರು.

ನೂತನ ಅನುಭವ ಮಂಟಪ ಕಾಮಗಾರಿ ಆರಂಭಗೊಂಡಿದ್ದು, ಬಸವ ಭಕ್ತರಲ್ಲಿ ಹರ್ಷ ಮೂಡಿಸಿದೆ. ಅನುಭವ ಮಂಟಪ ಉಳಿದರೆ ಮಾತ್ರ ಶರಣ ಸಾಹಿತ್ಯ ಮತ್ತು ವಚನ ಸಾಹಿತ್ಯ ಉಳಿಯಲು ಸಾಧ್ಯ. ಹೀಗಾಗಿ ಈ ಕಾಮಗಾರಿಯ್ನು ಸಂಬಂಧಿತರು ತ್ವರಿತಗತಿಯಲ್ಲಿ ಮುಗಿಸಲು ಪ್ರಯತ್ನಿಸಬೇಕು.
| ಶ್ರೀ ಡಾ.ಶಿವಾನಂದ ಸ್ವಾಮೀಜಿ, ಹುಲಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net