ಅನುದಾನಿತ, ಅನುದಾನರಹಿತ ಶಿಕ್ಷಕರ ಬೇಡಿಕೆ ಈಡೇರಿಸಲು ಆಗ್ರಹ

22-gdg-6
Published on

ವಿಜಯವಾಣಿ ಸುದ್ದಿಜಾಲ ಗದಗ

ಅನುದಾನಿತ ಮತ್ತು ಅನುದಾನರಹಿತ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದ ಪದಾ„ಕಾರಿಗಳು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್  ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ಲಮಾಣಿ, ಸರ್ಕಾರವು ಇತ್ತೀಚೆಗೆ ದಿನಕ್ಕೊಂದು ಅವೈಜ್ಞಾನಿಕ ಆದೇಶಗಳನ್ನು ಹೊರಡಿಸಿ ಶಿಕ್ಷಕರ ಬಾಳಿನ ಬದುಕಿಗೆ ಬರೆಯನ್ನು ಕೊಡುತ್ತಾ ಬರತೊಡಗಿದೆ. ಸರ್ಕಾರಿ ಶಿಕ್ಷಕರು, ಖಾಸಗಿ ಶಿಕ್ಷಕರು ಎಂಬ ತಾರತಮ್ಯ ಉಂಟು ಮಾಡಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಒರೆಸುತ್ತಾ ಬಂದಿದ್ದರಿಂದ ಖಾಸಗಿ ಶಾಲಾ ಶಿಕ್ಷಕರ ಬದುಕು ಅತ್ಯಂತ ಶೋಚನೀಯ ಸ್ಥಿತಿಗೆ ಬಂದೊದಗಿದೆ. ಒಂದೇ ಅಭ್ಯಾಸ ಹಾಗೂ ಎಲ್ಲರೂ ಕಲಿಸುವುದು ಮಕ್ಕಳಿಗೆ ಇರುವಾಗ ಈ ತಾರತಮ್ಯವೇಕೆ? ಇಲ್ಲಿ ಸಮಾನತೆ ಎನ್ನುವುದು ಕೇವಲ ಮರೀಚಿಕೆಯಾಗಿದೆ.ಸರ್ಕಾರ ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಕೂಡಲೇ ಜಾರಿಗೆ ತರುವುದು, ಅನುದಾನಿತ ಶಾಲೆಗಳಲ್ಲಿ ಕಾಲೇಜುಗಳಲ್ಲಿ 2015 ರಿಂದ 2022 ರವರೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡುವುದು. ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ಯೋಜನೆಯನ್ನು ಖಾಸಗಿ ಶಿಕ್ಷಕ ಸಿಬ್ಬಂದಿಯವರಿಗೂ ನೀಡುವುದು, ಕಾಲ್ಪನಿಕ ವೇತನ ಬಡ್ತಿಯನ್ನು ತಕ್ಷಣದಿಂದ ಜಾರಿಗೆ ತರುವುದು. ಅನುಮೋದನೆಗೊಂಡಿರುವ 93 ಚಿತ್ರಕಲಾ ಶಿಕ್ಷಕರನ್ನು ಅನುದಾನಕ್ಕೆ ಒಳಪಡಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ ವಿ.ಡಿ.ರೇವಣಕರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೆ.ಬಿ.ಭಜಂತ್ರಿ, ಎ.ಎಸ್.ಪಾಟೀಲ, ಎಸ್. ಎಂ. ಕೊಟಗಿ, ಸಿ.ಎಸ್. ಚಕ್ಕಡಿಮಠ, ಆರ್.ವೈ. ಗೊಂಡಬಾಳ, ಝಡ್.ಎಂ.ಖಾಜಿ, ಇ.ಎಂ. ಗುಳೇದಗುಡ್ಡ, ಸಂತೋಷ ನಾಗರಹಳ್ಳಿ, ಆರ್.ಎಫ್.ಜಾಗನೂರ, ಎಸ್.ಎಲ್ ಮುಳಗುಂದ, ಎಫ್.ಎಂ.ಹಳೆಮ್ಮನವರ, ಡಿ.ಎನ್.ಮರಡ್ಡಿ, ನವೀನ ಬಸವರಡ್ಡಿ, ವಿಷ್ಣು ಪವಾರ, ಎನ್.ಬಿ. ಸಚ್ಚಳದ, ಬಿ.ಸಿ. ಗುಳೇದ, ಕಿರಣ ಮುಂಡರಗಿ, ರವಿ ಕೋಟಿಯವರ, ಸುನೀಲ ಲಮಾಣಿ, ಯು.ಎಸ್. ಕಮಗೊಳಿ, ಪಿ.ಎನ್.ಹಿರೇಮಠ, ಯು.ಎಸ್.ಧನವಂತ, ಎ.ಬಿ.ಭಾವಿ, ಎಸ್.ಎಂ.ಪೂಜಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net