ಅನುದಾನ ಸಮಾನವಾಗಿ ಹಂಚಿಕೆ

MDG mla
ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಪಂ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಎಂ.ಕೆ.ಪ್ರಾಣೇಶ್, ಬಿ.ಬಿ.ನಿಂಗಯ್ಯ, ಬಿ.ಕೆ.ದಿನೇಶ್ ಇತರರಿದ್ದರು. ಹೂವಮ್ಮ, ಕೆ.ವಿ.ಗೋಪಾಲಗೌಡ, ಕೆ.ಎನ್.ಕುಮಾರ್, ಸುಶೀಲಾ ದೊಡ್ಡಯ್ಯ ಮತ್ತಿತರರಿದ್ದರು.
Published on

ಮೂಡಿಗೆರೆ: ಶಾಸಕರಾದ ಬಳಿಕ ಜಾತಿ, ಧರ್ಮ, ತಾರತಮ್ಯವಿಲ್ಲದೆ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇನೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಬೆಟ್ಟಗೆರೆ ಗ್ರಾಪಂನ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಪಂಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಾಕಷ್ಟು ಅಭಿವೃದ್ಧಿ ಮಾಡಬಹುದು. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರೂ ಅಭಿವೃದ್ಧಿಯತ್ತ ಗಮನಹರಿಸಿದರೆ ಜನರ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 49 ಗ್ರಾಪಂಗಳಿದ್ದು, 1022 ಹಳ್ಳಿಗಳಿವೆ. ಪ್ರತಿ ಹಳ್ಳಿಯಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಅದನ್ನು ಅರಿತು ನನಗೆ ಬರುವ ಶಾಸಕರ ಅನುದಾನವನ್ನು ಎಲ್ಲ ಪಂಚಾಯಿತಿ ವ್ಯಾಪ್ತಿಗೂ ಸಮನಾಗಿ ಹಂಚಿ ಅಭಿವೃದ್ಧಿ ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಬೆಟ್ಟಗೆರೆ ನೂತ ಸಾರ್ವಜನಿಕ ಬಸ್ ನಿಲ್ದಾಣ ಮತ್ತು ಜಾರ್ಗಲ್‌ನ ಅಂಗನವಾಡಿ ಕಟ್ಟಡ ಉದ್ಘಾಟಿಸಿದರು. ಬೆಟ್ಟಗೆರೆ ಗ್ರಾಪಂ ಅಧ್ಯಕ್ಷ ಬಿ.ಕೆ.ದಿನೇಶ್, ಉಪಾಧ್ಯಕ್ಷೆ ಹೂವಮ್ಮ, ಸದಸ್ಯರಾದ ಕೆ.ವಿ.ಗೋಪಾಲ ಗೌಡ, ಕೆ.ಎನ್.ಕುಮಾರ್, ಸುಶೀಲಾ ದೊಡ್ಡಯ್ಯ, ಸುಂದರಿ ಕೃಷ್ಣಪ್ಪ, ಬಣಕಲ್ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯ, ತಾಪಂ ಇಒ ದಯಾವತಿ, ರಾಜೀವ್‌ಗಾಂಧಿ ಸೇವಾ ಕೇಂದ್ರದ ನವೀನ್‌ಕುಮಾರ್, ಪಿಡಿಒ ದರ್ಶನ್, ಕಾರ್ಯದರ್ಶಿ ತೇಜಸ್ವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net