ಅನುದಾನ ಸದುಪಯೋಗಪಡಿಸಿಕೊಳ್ಳಿ

18Jaggu3
ಬೆಳಗಾವಿ ತಾಲೂಕು ಸುಳೇಬಾವಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಗ್ರೀನ್ ಬೋರ್ಡ್ ವಿತರಣೆ ಕಾರ್ಯಕ್ರಮವನ್ನು ಎಂಎಲ್‌ಸಿ ಹನುಮಂತ ನಿರಾಣಿ ಉದ್ಘಾಟಿಸಿದರು. ಧನಂಜಯ ಜಾಧವ, ಆರ್.ಬಿ. ಜುಟನ್ನವರ, ಉದಯ ಕೇಸರೂರ, ದ್ಯಾಮಣ್ಣ ಬಂಗೆಣ್ಣವರ, ವಿಠ್ಠಲ ಮಿರಜಕರ, ಎಸ್.ವೈ. ರಾಜಕರ ಇದ್
Published on

ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರ ಅನುದಾನದಲ್ಲಿ ತಾಲೂಕಿನ ಸುಳೇಬಾವಿ ಕನ್ನಡ ಪ್ರಾಥಮಿಕ ಶಾಲೆಗೆ ಬೆಳಗಾವಿ ಗ್ರಾಮೀಣ ಬಿಜೆಪಿ ಘಟಕದಿಂದ ಸೋಮವಾರ ಏಳು ಗ್ರೀನ್ ಬೋರ್ಡ್ ವಿತರಿಸಲಾಯಿತು.

ಹನುಮಂತ ನಿರಾಣಿ ಮಾತನಾಡಿ, ಬಿಜೆಪಿ ಗ್ರಾಮೀಣ ಮಂಡಳವು ಒಳ್ಳೆಯ ಕಾರ್ಯ ಮಾಡುತ್ತಿದೆ. ಮತ್ತಷ್ಟು ಅನುದಾನವನ್ನು ಕೊಡಲು ಸಿದ್ಧನಿದ್ದೇನೆ. ಬಿಜೆಪಿ ಗ್ರಾಮೀಣ ಮಂಡಳದ ಕಾರ್ಯಕರ್ತರು ಅನುದಾನ ಸದುಪಯೋಗ ಮಾಡಿಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದರು.

ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಮುಂಬರುವ ದಿನಗಳಲ್ಲಿ ಗ್ರಾಮೀಣದ ಪ್ರಾಥಮಿಕ ಶಾಲೆಗಳಿಗೆ ಗ್ರೀನ್‌ಬೋರ್ಡ್ ವಿತರಿಸುವ ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೆ ಹನುಮಂತ ನಿರಾಣಿ ಅವರು ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ ಎಂದರು. ಆರ್.ಬಿ. ಜುಟನ್ನವರ, ಎಸ್‌ಡಿಎಂಸಿ ಅಧ್ಯಕ್ಷ ಉದಯ ಕೇಸರೂರ, ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ದ್ಯಾಮಣ್ಣ ಬಂಗೆಣ್ಣವರ, ಶಾಲೆ ಮುಖ್ಯಶಿಕ್ಷಕ ವಿಠ್ಠಲ ಮಿರಜಕರ, ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ವೈ.ರಾಜಕರ, ಸಂಜುಕುಮಾರ ದೊಡ್ಡಮನಿ, ಗಣಪತಿ ಹೊಸಮನಿ, ಕಲ್ಲಪ್ಪ ಜಿ., ನವೀನ್ ಹೊನ್ನಿಹಾಳ, ತಿಪ್ಪಾಜಿ ಮೋರೆ, ಸದಾನಂದ ಗಡದ, ಪ್ರಶಾಂತ ಸೋಗಲಿ, ಶಿವಾಜಿ ಅರೇರ, ಸಂಜಯ ಜಾಧವ ಹಾಗೂ ಇನ್ನೂ ಅನೇಕರು ಇತರರಿದ್ದರು.ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net