ಅನುದಾನ ದುರುಪಯೋಗ ಮಾಡಿಕೊಂಡಿರುವ ಕುರಿತು ತನಿಖೆ ನಡೆಸಿ

0309Klb01
Published on

ಕಲಬುರಗಿ: ಮೈಸೂರಿನ ಪಿಂಜರಾಪೋಲ್ ಮತ್ತು ಇನ್ನಿತರ ಗೋ ಶಾಲೆ ಸಂಸ್ಥೆಗಳು ಜಿಲ್ಲೆಗೆ ನೀಡಿರುವ ಅನುದಾನ ದುರುಪಯೋಗ ಮಾಡಿಕೊಂಡಿರುವ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಹಿಂದು ರಕ್ಷಕ ಶಿವಾಜಿ ಬ್ರಿಗೇಡ್ ಕಾರ್ಯಕರ್ತರು ಗುರುವಾರದಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮೈಸೂರಿನ ಪಿಂಜರಾಪೋಲ್ ಸಂಸ್ಥೆಯ ಬೆಂಬಲದ ಯೋಜನೆಯಡಿ ಗೋಶಾಲೆಗಳಿಗೆ ನೀಡಿದ ನೆರವನ್ನು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಹೀಗಾಗಿ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಗೋಶಾಲೆಗಳ ಪ್ರಮುಖರು ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬ್ರಿಗೇಡ್ ಅಧ್ಯಕ್ಷ ಗುರುಶಾಂತ ಟೆಂಗಳಿ ದೂರಿದರು.
ಪ್ರತಿಭಟನೆಯಲ್ಲಿ ಗುರುರಾವ ಟೆಂಗಳಿ, ಸಂತೋಷ ಬೆನಕನಳ್ಳಿ, ಶಿವರಾಜ ಬಾಳಿ, ಶ್ರೀಶೈಲ ಮೂಲಗೆ, ಸುರೇಶ ತಳವಾರ, ಶಾಂತವೀರ ಸಾಲಿಮಠ, ಧನರಾಜ ಡೊಗರೆ, ರಾಚು ಬೋಗುಂಡಿ, ಶಿವು ಬಿರಾದಾರ, ವೈಜನಾಥ ಪಾಟೀಲ್, ರಾಜು ಗುಳೇದ, ಪ್ರಶಾಂತ ಬಂಡಗರ, ಕಿರಣ ಬೋಳೆಗಾಂವಕರ್, ಸುನೀಲ್ ಚಿನ್ಮಯಿ, ಭಾಗಣ್ಣ ಸ್ವಾದಿ, ರೋಹಿತ ಅರಳಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net