ಅನಿಷ್ಟ ಪದ್ಧತಿ ನಿರ್ಮೂಲನೆಯಾಗಲಿ

8 hrp 03
ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಸೀಗೆ ಹುಣ್ಣಿಮೆ ಪ್ರಯುಕ್ತ ಬೀದಿ ನಾಟಕ ಪ್ರದರ್ಶನ ನಡೆಯಿತು. ಯೋಜನಾಧಿಕಾರಿ ಸುಧಾ ಎಂ.ಚಿದ್ರಿ, ವಲಯ ಮೇಲ್ವಿಚಾರಕಿ ಸಾವಿತ್ರಮ್ಮ, ಸೇವಾಸಂಸ್ಥೆಯ ಸರೋಜಾ ಹವಳದ, ಕೆರೆಗುಡಿಹಳ್ಳಿ ಹಾಲೇಶ್, ಕಲ್ಪನಾ, ಪುಟ್ಟರಾಜು, ರಂಗಸ್ವಾಮಿ ಇತರರಿದ್ದರು.
Published on

ಹರಪನಹಳ್ಳಿ: ದೇವದಾಸಿ ಪದ್ಧತಿ ಹೆಸರಿನಲ್ಲಿ ನಡೆಯುವ ಮುತ್ತು ಕಟ್ಟುವ ಮೌಢ್ಯ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ರೇಣುಕಮ್ಮ ಆಗ್ರಹಿಸಿದರು. ಸೀಗೆ ಹುಣ್ಣಿಮೆ ಪ್ರಯುಕ್ತ ಉಚ್ಚಂಗಿದುರ್ಗ ಗ್ರಾಮದಲ್ಲಿ ಆಯೋಜಿಸಿದ್ದ ಬೀದಿ ನಾಟಕಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಅನಿಷ್ಟ ಪದ್ಧತಿಗೆ ಅನೇಕ ಮಹಿಳೆಯರು ಬಲಿಯಾಗುತ್ತಿದ್ದಾರೆ. ಪ್ರತಿ ಮಹಿಳೆ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು. ಅನಿಷ್ಟ ಪದ್ಧತಿ ಕೊನೆಯಾಗಲು ಜನರು ಜಾಗೃತಿ ತೋರಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net