ಅನಿತಾ ಚವ್ಹಾಣಗೆ ರಾಜ್ಯ ವುಶು ಸಂಸ್ಥೆಯಿಂದ ಸನ್ಮಾನ

bkt-28-7
ಚಿನ್ನದ ಪದಕ ವಿಜೇತೆ ಅನಿತಾ ಚವ್ಹಾಣಗೆ ಚರಂತಿಮಠರಿಂದ ಸನ್ಮಾನ.
Published on

ಬಾಗಲಕೋಟೆ: ಅಂತರಾಷ್ಟ್ರೀಯ ವುಶು ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಅನಿತಾ ಚವ್ಹಾಣಗೆ ಕರ್ನಾಟಕ ವುಶು ಸಂಸ್ಥೆಯವತಿಯಿಂದ ವುಶು ಸಂಸ್ಥೆಯ ಅಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಸೋಮವಾರ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.

2024 ರ ಅಕ್ಟೋಬರ ತಿಂಗಳ ದಿನಾಂಕ 17ರಿಂದ 23ವರೆಗೆ ಜಾರ್ಜಿಯಾ ದೇಶದ ಬಾಟೂಮಿಯಲ್ಲಿ ನಡೆದ ಅಂತರಾಷ್ಟ್ರೀಯ ವುಶು ಚಾಂಪಿಯನ್ನಶಿಪ್ ಕ್ರೀಡಾಕೂಟದಲ್ಲಿ 15 ದೇಶಗಳಿಂದ 1500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಿದ್ದರು. ಭಾರತ ದೇಶದಿಂದ ಬಾಗಲಕೋಟೆಯ ಕುಮಾರಿ ಅನಿತಾ ಚವ್ಹಾಣ ಭಾಗಿಯಾಗಿ ಅತ್ಯುತ್ತಮ ಪ್ರದರ್ಶನ ನೀಡಿ ತಾವಲು ವಿಭಾಗದ ಕ್ವಾನ್ ಡೌ ದಲ್ಲಿ ಬಂಗಾರ ಪದಕ ಹಾಗೂ ನಾನ್ ಕ್ವಾನ್ ಟೈಪ್‌ದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡು ಭಾರತ ದೇಶ ಹಾಗೂ ರಾಜ್ಯಕ್ಕೆ ಬಾಗಲಕೋಟೆ ಜಿಲ್ಲೆ ಹಾಗೂ ಕರ್ನಾಟಕ ವುಶು ಸಂಸ್ಥೆಗೆ ಕೀರ್ತಿ ತಂದಿದ್ದಾಳೆ, ಇವಳಿಗೆ ಸಂಘದ ಕಛೇರಿಯಲ್ಲಿ ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಸನ್ಮಾನಿಸಿ ಶುಭ ಹಾರೈಸಿ ಮತನಾಡಿದ ಅವರು, ಕರ್ನಾಟಕ ರಾಜ್ಯ ವುಶು ಸಂಸ್ಥೆಗೆ ಹಮ್ಮೆಯ ವಿಷಯವಾಗಿದ್ದು, ವುಶು ಪ್ರಾರಂಭವಾಗಿ 37 ವರ್ಷವಾಗಿದೆ, ಈ ತರದ ಸಾಧನೆ ಮಾಡಿರುವುದು ಇದೆ ಪ್ರಥಮ, ಅದು ಮಹಿಳಾ ವಿಭಾಗ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಪ್ರತಿಭೇ ಸಾಧನೆ ಮಾಡಿರುವುದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ವುಶು ಸಂಸ್ಥೆಯ ಉಪಾಧ್ಯಕ್ಷರಾದ ಅಶೋಕ ಸಜ್ಜನ ಬೇವೂರ, ಕುಮಾರಸ್ವಾಮಿ ಹಿರೇಮಠ, ರಾಜು ನಾಯ್ಕರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ ಮೋಖಾಶಿ, ಸಂಗಮೇಶ ಲಾಯದಗುಂದಿ,ಆರ್.ಎಮ್.ಹಿರೇಮಠ, ಅವಿನಾಶ ಹಿರೇಮಠ, ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net