ಅನಾರೋಗ್ಯ ಬಂದರೆ ನಿರ್ಲಕ್ಷ್ಯ ಬೇಡ

1Aigali1
Published on

ಐಗಳಿ: ಅನಾರೋಗ್ಯ ಕಂಡು ಬಂದರೆ ನಿರ್ಲಕ್ಷಿಸದೇ ವೈದ್ಯರನ್ನು ಕಾಣಬೇಕು ಎಂದು ವಿಜಯಪುರ ಡಾ. ಉಮಾಮಹೇಶ್ವರ ಸಿಂಧೂರ ಹೇಳಿದರು.

ಅವರು ಸ್ಥಳೀಯ ಸಿಂಧೂರ ವಸತಿ ಇರುವ ಅಪ್ಪಯ್ಯ ಸ್ವಾಮಿ ಜಾತ್ರೆ ಹಾಗೂ ದಿ.ಕುಮಾರ ಡವಳೇಶ್ವರ ಅವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ಮೊದಲಿನ ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ, ಇಂದು ದುಡ್ಡು ಮಾಡಬೇಕೆಂದುಕೊಂಡು ಒತ್ತಡದ ಮಧ್ಯೆ ದುಡಿದು ನೆಮ್ಮದಿ ಹಾಗೂ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಲಿಂ.ಮಲ್ಲಪ್ಪ ಅಜ್ಜನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದೇವೆ. ನಾನು ಹುಟ್ಟಿದ ಐಗಳಿ ಗ್ರಾಮಸ್ಥರು ಆರಾಮದಿಂದ ಇರಬೇಕು. ಕಾಲ ಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಶಿಬಿರ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಜಾತ್ರಾ ಕಮಿಟಿ ಉಪಾಧ್ಯಕ್ಷ ಮಹಾದೇವ ಹಾಲಳ್ಳಿ ಮಾತನಾಡಿ, ಅಪ್ಪಯ್ಯ ಸ್ವಾಮಿಗಳು ಪವಾಡ ಪುರುಷರು. ಅವರಲ್ಲಿ ಒಂದು ಶಕ್ತಿ ಇದೆ. ಶ್ರೀಗಳ ಪರಮ ಭಕ್ತನಾದ ಲಿಂ.ಮಲ್ಲಪ್ಪ ಶರಣರು ಎರಡು ಎಕರೆ ಜಮೀನಿನ ಒಂದು ಸುಂದರವಾದ ಅಪ್ಪಯ್ಯ ಸ್ವಾಮಿಗಳ ದೇವಾಲಯ ನಿರ್ಮಿಸಿ ಅದನ್ನು ಸಾರ್ವಜನಿಕರಿಗೆ ಒಪ್ಪಿಸಿದ ಮಹಾ ಶರಣರು. ಅವರಲ್ಲಿರುವ ತ್ಯಾಗ ಮನೋಭಾವ ಗುಣ ದೊಡ್ಡದು ಎಂದರು.

ಕನ್ನಾಳದ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ. ಎಸ್.ಎಸ್.ಸನದಿ ಶಿಬಿರ ಉದ್ಘಾಟಿಸಿದರು.

ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಿಂಗನಗೌಡ ಪಾಟೀಲ, ಹಣಮಂತ ಕರಿಗಾರ, ದಾನಯ್ಯ ಮಠಪತಿ, ಶಿದ್ರಾಮ ಸಿಂಧೂರ, ಡಾ. ಸುಧಾ ವಾಲೀಕಾರ, ಅಕ್ಷಯ ವಾಲೀಕಾರ, ದಾನೇಶ ನಿರಜನ, ದುಂಡಪ್ಪ ಗಾಂಜದ, ಶಿವಾನಂದ ವಿಡುತೆ, ಪೂಜಾ ರಾಜಪೂತ್, ಮಧುರಾ ಶಿರೋಳಕರ, ಕಾಶಿನಾಥ ಹಳೇಮನಿ, ಭೀಮಾಶಂಕರ ಜಮಶಟ್ಟಿ, ಗಜಾನನ ರಾಹುತೆ, ಶ್ರೀದೇವಿ ರಾಹುತೆ ಸೇರಿದಂತೆ ಅನೇಕರು ಇದ್ದರು. ಕೇದಾರಿ ಬಿರಾದಾರ ಸ್ವಾಗತಿಸಿದರು. ಮಲಗೌಡ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net