ಅನಾರೋಗ್ಯ ಕಾರಣಕ್ಕೆ ತಾಯಿ, ಮಗ ಆತ್ಮಹತ್ಯೆ

Published on

ತುರುವೇಕೆರೆ: ಅನಾರೋಗ್ಯದಿಂದ ಬೇಸತ್ತ ಪಟ್ಟಣದ ಬ್ರಾಹ್ಮಣ ಬೀದಿಯಲ್ಲಿ ವಾಸವಾಗಿದ್ದ ತಾಯಿ, ಮಗ ತಮ್ಮ ಮನೆಯಲ್ಲಿಯೇ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಮಲಮ್ಮ(78), ಪುತ್ರರಘು (55) ಮೃತರು. ಇಬ್ಬರು ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ವಾಸವಾಗಿದ್ದ ಮೃತನ ತಮ್ಮ ಗುರುವಾರ ರಾತ್ರಿ ಪೋನ್​ ಮಾಡಿದಾಗ ಕರೆ ಸ್ವೀಕರಿದ ಕಾರಣ ಅನುಮಾನಗೊಂಡು ಶುಕ್ರವಾರ ಬೆಳಗ್ಗೆ ಪಕ್ಕದ ಮನೆಯವರಿಗೆ ಪೋನ್​ ಮಾಡಿ ಗಮನಿಸುವಂತೆ ತಿಳಿಸಿದ್ದಾರೆ. ನೆರೆ ಮನೆಯವರು ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಮೃತ ರಘು ಗೋಣಿತುಮಕೂರಿನ ರಾಮಾಂಜನೇಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ದ್ವೀತಿಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವಿವಾಹತರಾಗಿದ್ದ ರು ತಾಯಿಯ ಯೋಗಕ್ಷೇಮ ನೋಡಿಕೊಂಡು ಜತೆಯಲ್ಲೇ ಇದ್ದರು. ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net