ಅನಾಥ ಶವಕ್ಕೆ ಪೊಲೀಸರಿಂದ ಅಂತ್ಯಸಂಸ್ಕಾರ

Published on

ಹನೂರು: ತಾಲೂಕಿನ ಕೌದಳ್ಳಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಅನಾಥ ಶವಕ್ಕೆ ಭಾನುವಾರ ರಾಮಾಪುರ ಪೊಲೀಸರು ಅಂತ್ಯಸಂಸ್ಕಾರ ನೆರವೇರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಳೆದ ಮೂರು ದಿನದ ಹಿಂದೆ ಕೌದಳ್ಳಿ ಬಸ್ ನಿಲ್ದಾಣದಲ್ಲಿ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ವಾರಸುದಾರರ ಬರುವಿಕೆಗಾಗಿ ಶವವನ್ನು ಚಾ.ನಗರ ಮೆಡಿಕಲ್ ಕಾಲೇಜಿನ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಆದರೆ, ವಾರಸುದಾರರು ಇಲ್ಲದ ಕಾರಣ ರಾಮಾಪುರ ಪೊಲೀಸರು ಯಡಬೆಟ್ಟದಲ್ಲಿ ಶವಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net