

ಮೈಸೂರು: ಬೋಗಾದಿಯ ರೂಪಾನಗರದ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯಲ್ಲಿ ಗಾಯಗೊಂಡ ಶ್ವಾನಗಳ ಆರೈಕೆ ಕೇಂದ್ರವನ್ನು ಉದ್ಘಾಟಿಸಲಾಯಿತು.
ರಾಜವಂಶಸ್ಥೆ ತ್ರಿಷಿಕಾ ಒಡೆಯರ್ ಮಾತನಾಡಿ, ಗಾಯಗೊಂಡ ಅನಾಥ ನಾಯಿಗಳನ್ನು ಆರೈಕೆ ಮಾಡುವ ಕೇಂದ್ರ ತೆರೆದಿರುವುದು ಸಂತೋಷದ ಸಂಗತಿ. ಇದು ಉತ್ತಮ ಕಾರ್ಯವಾಗಿದೆ. ಇದಕ್ಕೆ ಸಾರ್ವಜನಿಕರು ಉತ್ತೇಜನ ನೀಡಬೇಕು. ಸಾಕುಪ್ರಾಣಿಗಳನ್ನು ಖರೀದಿ ಮಾಡುವುದನ್ನು ಕಡಿಮೆ ಮಾಡಬೇಕು. ಅದರ ಬದಲು ಅನಾಥ ಸಾಕುಪ್ರಾಣಿಗಳನ್ನು ದತ್ತು ಪಡೆದುಕೊಂಡು ಸಾಕಬೇಕು. ಇದು ಮಾನವೀಯ ಕೆಲಸವಾಗಲಿದೆ ಎಂದರು.
ಸಂಸ್ಥೆಯ ಸವಿತಾ ನಾಗಭೂಷಣ ಮಾತನಾಡಿ, ಅಂಗಹೀನ ನಾಯಿಗಳಿಗೆ ಪ್ರತ್ಯೇಕ ಆವರಣ ರೂಪಿಸುವುದು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಅಂಗಳ ನಿರ್ಮಾಣದ ದಾನಿಗಳಾದ ಡಾ.ಡಿ.ಎಲ್.ಮಾಧವಿ ಅವರು ವಿದ್ವಾಂಸ ಡಿ.ಎಲ್.ನರಸಿಂಹಾಚಾರ್ ಅವರ ಪುತ್ರಿಯಾಗಿದ್ದು, ವಿಜ್ಞಾನಿಯಾಗಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರು ಸಂಸ್ಥೆಗೆ ನೆರವಾಗಿರುವುದು ಶ್ಲಾಘನೀಯ ಎಂದರು.