ಅನಾಥ ಕಂದಮ್ಮಗಳಿಗೆ ಜನ್ಮದಿನ ಸಂಭ್ರಮ

brims
Published on

ಬೀದರ್: ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ 73ನೇ ಜನ್ಮದಿನವನ್ನು ಶುಕ್ರವಾರ ಅನಾಥ (ಸುದೈವಿ) ಮಕ್ಕಳ ಜನ್ಮದಿನವನ್ನಾಗಿ ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವಿಧೆಡೆ ರಕ್ತದಾನ ಶಿಬಿರ, ಹಣ್ಣು ವಿತರಣೆ, ಸಸಿ ನೆಡುವಿಕೆ ಸೇರಿ ನಾನಾ ಕಾರ್ಯಕ್ರಮಗಳು ಜರುಗಿದವು.
ವಿದ್ಯಾನಗರ ಕಾಲನಿಯ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಿಂದ ಬ್ರಿಮ್ಸ್ ನಲ್ಲಿ ರೋಗಿಗಳಿಗೆ ಹಣ್ಣು ವಿತರಿಸುವ ಮೂಲಕ ಸುದೈವಿ ಮಕ್ಕಳ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ಉದ್ಘಾಟಿಸಿ ಮಾತನಾಡಿ, ಅನಾಥ ಮಕ್ಕಳ ಉಜ್ವಲ ಭವಿಷ್ಯವನ್ನು ಪೂಜ್ಯರು ರೂಪಿಸುತ್ತಿದ್ದಾರೆ ಎಂದು ಕೊಂಡಾಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ್, ಜಿಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಪ್ರಸಾದ ನಿಲಯದ ಕಾರ್ಯದರ್ಶಿ ಎಸ್.ಬಿ. ಬಿರಾದಾರ್ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಜನವಾಡದ ಅಲ್ಲಮಪ್ರಭು ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಯೋಗೇಂದ್ರ ಯದಲಾಪುರೆ, ಸಂಗ್ರಾಮ ಎಂಗಳೆ, ಶಿವಕುಮಾರ ಭಾಲ್ಕೆ, ಸಂಗ್ರಾಮಪ್ಪ ಬಿರಾದಾರ್, ಗುರುನಾಥ ಬಿರಾದಾರ್, ಬಸವರಾಜ ಭತಮುರ್ಗೆ, ಸುನೀಲ ಡಾ.ವೈಜಿನಾಥ ಬಿರಾದಾರ್, ಶಿವಕುಮಾರ ಪಾಟೀಲ್ ತೇಗಂಪುರ, ಸುನೀಲ, ಪ್ರಸಾದ ನಿಲಯದ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಇತರರಿದ್ದರು. ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಮೀನಾಕ್ಷಿ ಪಾಟೀಲ್ ಸ್ವಾಗತಿಸಿದರು. ಲಕ್ಷ್ಮೀಬಾಯಿ ಬಿರಾದಾರ್ ನಿರೂಪಣೆ ಮಾಡಿದರು. ವಿಜಯಲಕ್ಷ್ಮೀ ಹುಗ್ಗೆಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net