

ಯಾದಗಿರಿ: ನಗರದ ಅನಮೋಲ್ ಬಡಾವಣೆಯಲ್ಲಿ ಮೂಲಸೌಲಭ್ಯದ ಕೊರತೆಯಿಂದ ನಿವಾಸಿಗಳು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದು, ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗ ಹರಡುತ್ತಿವೆ ಎಂದು ಆರೋಪಿಸಿದ್ದಾರೆ.
ವಾಡರ್್ 1 ಮತ್ತು 2 ರ ವ್ಯಾಪ್ತಿಯಲ್ಲಿ ಬರುವ ಈ ಬಡಾವಣೆಯಲ್ಲಿ 800ಕ್ಕೂ ಹೆಚ್ಚು ಜನಸಂಖ್ಯೆಇದೆ. ಚರಂಡಿ ನಿಮರ್ಿಸದ ಕಾರಣ ರಸ್ತೆಗಳಲ್ಲಿ ನೀರು ಹರಿದು ಗಬ್ಬೆದ್ದು ನಾರುತ್ತಿವೆ. ಸೊಳ್ಳೆಗಳ ಉತ್ಪನ್ನ ಕೇಂದ್ರವಾಗಿ ಮಾರ್ಪಟ್ಟಿದೆ. ನಮಗೆ ಸೌಲಭ್ಯ ಕೊಡಿ ಎಂದು ಕಳೆದ 5 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಗೆ ಪ್ರತಿವರ್ಷ ತೆರಿಗೆ ಪಾವತಿಸುತ್ತ ಬರುತ್ತಿದ್ದರೂ ನಿವಾಸಿಗಳಿಗೆ ಮಾತ್ರ ಯಾವುದೇ ಸೌಲತ್ತು ಕೊಟ್ಟಿಲ್ಲ. ಭೀಮಾ ನದಿಯಿಂದ 50 ಕಿ.ಮೀ. ದೂರದ ಗುರುಮಠಕಲ್ಗೆ ಕುಡಿವ ನೀರು ಪೂರೈಕೆಯಾಗುತ್ತಿದೆ. ಆದರೆ ಜಿಲ್ಲಾಡಳಿತ ಭವನದಿಂದ ಕೇವಲ ಅರ್ಧ ಕಿಮೀ. ಇರುವ ಬಡಾವಣೆಗೆ ಕನಿಷ್ಠ ನೀರು ಕೊಡಲು ಆಗಿಲ್ಲ. ರಾತ್ರಿ ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಇದರಿಂದ ಮಕ್ಕಳು, ಪೊಷಕರು ಭಯದ ವಾತಾವರಣದಲ್ಲಿ ತಿರುಗಾಡುವ ಪರಿಸ್ಥಿತಿ ನಿಮರ್ಾಣವಾಗಿದೆ.
ಶಾಲೆಗೆ ಹೋಗಲು ರಸ್ತೆ ಸರಿ ಇಲ್ಲದಿರುವ ಕಾರಣ ಆಟೊಗಳು ಪಲ್ಟಿಯಾಗಿವೆ. ರಸ್ತೆಬದಿ ಜಾಲಿಕಂಟಿ ಬೆಳೆದಿರುವುದರಿಂದ ದಾರಿ ಕಾಣದ ಪರಿಸ್ಥಿತಿ ನಿಮರ್ಾಣವಾಗಿದೆ. ಕಸ ನಿರ್ವಹಣೆ ವಾಹನ ಬರದ ಕಾರಣ ಎಲ್ಲ ಕಸವನ್ನು ಒಂದೆಡೆ ಗುಡಿಸಿ ಬೆಂಕಿ ಹಚ್ಚಿ ವಾಡರ್ಿನ ಜನರೇ ನಿರ್ವಹಿಸುತ್ತಿದ್ದಾರೆ ಕೂಡಲೇ ನಗರಸಭೆ ಅಧಿಕಾರಿಗಳು ಈ ಬಡಾವಣೆಯತ್ತ ಗಮನ ಹರಿಸದಿದ್ದರೆ ನಗರದ ಸೇಡಂ-ಯಾದಗಿರಿ ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಟೋಕರಿ ಕೋಲಿ ಸಮಾಜದ ಉಮೇಶ ಮುದ್ನಾಳ್, ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.