ಅನಧಿಕೃತ ಹೊಗೆಸೊಪ್ಪು ಮಾರಾಟ ಮಾಡಲು ಅವಕಾಶ ನೀಡಾಗಿದೆ: ಎಂ. ಲಕ್ಷ್ಮಣರಾವ್

ಅನಧಿಕೃತ ಹೊಗೆಸೊಪ್ಪು ಮಾರಾಟ ಮಾಡಲು ಅವಕಾಶ ನೀಡಾಗಿದೆ: ಎಂ. ಲಕ್ಷ್ಮಣರಾವ್
Published on


ಅರಕಲಗೂಡು: ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಪ್ರಸಕ್ತ 2022- 23ನೇ ಸಾಲಿನಲ್ಲಿ ನೋಂದಾಯಿತ ಬೆಳೆಗಾರರಿಂದ ಉತ್ಪಾದಿಸಲ್ಪಟ್ಟ ಹೆಚ್ಚುವರಿ ಹಾಗೂ ನೋಂದಾಯಿಸದ ಬೆಳೆಗಾರರಿಂದ ಉತ್ಪಾದಿಸಲಾದ ಅನಧಿಕೃತ ಹೊಗೆಸೊಪ್ಪು ಮಾರಾಟ ಮಾಡಲು ಅವಕಾಶ ನೀಡಾಗಿದೆ ಎಂದು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಂ. ಲಕ್ಷ್ಮಣರಾವ್ ತಿಳಿಸಿದರು.


ರಾಮನಾಥಪುರ ತಂಬಾಕು ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ನೋಂದಾಯಿತ ಬೆಳೆಗಾರರು ಉತ್ಪಾದಿಸುವ ಹೆಚ್ಚುವರಿ ಫ್ಲೋ ಕೂರ್ಡ್ ವರ್ಜೀನಿಯಾ ತಂಬಾಕನ್ನು ಮತ್ತು ನೋಂದಾಯಿಸದ ಬೆಳೆಗಾರರು ಉತ್ಪಾದಿಸುವ ಅನಧಿಕೃತ ಫ್ಲೋ ಕ್ಯೂರ್ಡ್ ವರ್ಜೀನಿಯಾ ತಂಬಾಕನ್ನು ಅನ್ವಯವಾಗುವ ಸೇವಾ ಶುಲ್ಕಗಳೊಂದಿಗೆ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪರಿಗಣಿಸಲಾಗಿದೆ. 2022- 2023 ಸಾಲಿನಲ್ಲಿ ತಂಬಾಕು ಬೆಳೆ ಕಡಿಮೆ ಉತ್ಪಾದನೆಯನ್ನು ಪರಿಗಣಿಸಿ ಹೆಚ್ಚುವರಿ ಸೇವಾ ಶುಲ್ಕಗಳನ್ನು ಮನ್ನಾ ಮಾಡಲಾಗುವುದು ಎಂದರು.


ಕರ್ನಾಟಕದಲ್ಲಿ ಈ ವರ್ಷದಲ್ಲಿ, 40,207 ರೈತರು 60,782 ಹೆಕ್ಟೇರ್ ಪ್ರದೇಶದಲ್ಲಿ ಎಫ್‌ಸಿವಿ ತಂಬಾಕನ್ನು ಬೆಳೆದಿದ್ದು ಮತ್ತು ಬೆಳೆ ಸಮಯದಲ್ಲಿ ಅಂದರೆ ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರಂತರ ಮಳೆಯ ದೃಷ್ಟಿಯಿಂದ ತಂಬಾಕು ಮಂಡಳಿಯು ನಿಗದಿಪಡಿಸಿದ 100 ಮಿಲಿಯನ್ ಕೆಜಿ ಬೆಳೆ ಗಾತ್ರಕ್ಕೆ ಹೋಲಿಸಿದರೆ 59.78 ಮಿಲಿಯನ್ ಕೆಜಿ ಬೆಳೆಯನ್ನು ಮಾತ್ರ ಉತ್ಪಾದಿಸಲು ಸಮರ್ಥರಾಗಿದ್ದಾರೆ. ವಾಣಿಜ್ಯ ಸಚಿವರಿಂದ ನಿರ್ಧಾರವಾದ, ಶೂನ್ಯ ದಂಡದ (ಅಥವಾ) ನೋಂದಾಯಿತ ಬೆಳೆಗಾರರಿಂದ ಉತ್ಪಾದಿಸುವ ಹೆಚ್ಚುವರಿ ತಂಬಾಕು ಮತ್ತು ನೋಂದಾಯಿಸದ ಬೆಳೆಗಾರರಿಂದ ಅನಧಿಕೃತ ತಂಬಾಕು ಮಾರಾಟಕ್ಕೆ ಯಾವುದೇ ದಂಡವನ್ನು ವಿಧಿಸುವುದಿಲ್ಲ. ರೈತರಿಗೆ ಈ ವರ್ಷ ಕಡಿಮೆ ಉತ್ಪಾದನೆ ನಷ್ಟದಿಂದ ಹೊರಬರಲು ಉಪಯೋಗವಾಗಿದೆ. ತಂಬಾಕು ಮಂಡಳಿಯ ಪರಿಶ್ರಮದಿಂದ ಹೆಚ್ಚುವರಿ ಸೇವಾ ಶುಲ್ಕಗಳನ್ನು ಮನ್ನಾ ಮಾಡಲಾಗಿದೆ. ಇದರಿಂದಾಗಿ ಎಫ್‌ಸಿ ತಂಬಾಕು ರೈತರಿಗೆ ಕಡಿಮೆ ಉತ್ಪಾದನೆಯಿಂದ ಉಂಟಾದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿದೆ. ಜತೆಗೆ ತಂಬಾಕು ಬೆಳೆಗಾರರು ತಮ್ಮ ಜೀವನೋಪಾಯವನ್ನು ಮುಂದುವರಿಸಲು ಹೆಚ್ಚು ಅನುಕೂಲವಾಗಲಿದೆ. ಹೆಚ್ಚುವರಿ ಹಾಗೂ ಅನಧಿಕೃತವಾಗಿ ಉತ್ಪಾದಿಸಿರುವ ಹೊಗೆಸೊಪ್ಪನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net