

ಚಿತ್ರದುರ್ಗ: ಸರ್ಕಾರದಿಂದ ಸೂಕ್ತ ಮಾನ್ಯತೆ ಪಡೆಯದ ಚಿತ್ರದುರ್ಗ ತಾಲೂಕಿನ ಹಲವು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದೆಂದು ಬಿಇಒ ಎಸ್.ನಾಗಭೂಷಣ್ ಅವರು ಪಾಲಕರನ್ನು ಎಚ್ಚರಿಸಿದ್ದಾರೆ.
ಹೊಸದಾಗಿ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಅಥವಾ ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಮಕ್ಕಳನ್ನು ದಾಖಲಿಸುವಾಗ ಎಚ್ಚರಿಕೆ ವಹಿಸ ಬೇಕು. ತಾಲೂಕಿನಲ್ಲಿ ರಾಜ್ಯಪಠ್ಯಕ್ರಮದ 77,ಸಿಬಿಎಸ್‌ಸಿ ಪಠ್ಯಕ್ರಮದ 05 ಮತ್ತು ಸಿಐಎಸ್‌ಸಿಇ ಪಠ್ಯಕ್ರಮದ 3 ಶಾಲೆಗಳು ಅಧಿಕೃತವಾಗಿ ನೋಂದಣಿಯಾಗಿವೆ.
ಈ ಶಾಲೆಗಳ ಹೆಸರು,ವಿಳಾಸ,ಆಡಳಿತ ಮಂಡಳಿ ವಿಳಾಸ,ಡೈಸ್‌ಸಂಖ್ಯೆ,ನೋಂದಣಿ ವರ್ಷ,ನೋಂದಣಿ ಪಡೆದ ಮಾಧ್ಯಮ,ಮಾನ್ಯತೆ ನವೀಕ ರಣ,ಅನುಮತಿ ಪಡೆದ ತರಗತಿಗಳು,ಪಠ್ಯಕ್ರಮ ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ತಿಳಿವಳಿಕೆಗಾಗಿ ಪ್ರಕಟಿಸ ಲಾಗಿದೆ.
ಈ ಶಾಲೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸಿದರೆ ಶಿಕ್ಷಣ ಇಲಾಖೆ ಯಾವುದೇ ಜವಾಬ್ದಾರಿ ಆಗದು. ಆದ್ದರಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಶಾಲೆಗಳ ಬಗ್ಗೆ ಮಾಹಿತಿ ಪಡೆದು ಮಕ್ಕಳನ್ನು ದಾಖಲಿಸ ಬೇಕೆಂದು ನಾಗಭೂಷಣ್ ಪಾಲ ಕರಲ್ಲಿ ಮನವಿ ಮಾಡಿದ್ದಾರೆ.