

ಚಿಕ್ಕಮಗಳೂರು: ನಗರದಲ್ಲಿ ಅನಧಿಕೃತವಾಗಿ ಶಾಲೆಯನ್ನು ನಡೆಸುತ್ತಿರುವವರ ಬಗ್ಗೆ ಶಿಸ್ತು ಕ್ರಮ ಕೈಕೊಳ್ಳಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಮುಖಂಡರುಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸೂಪರ್ಡೆಂಟ್ ಲತಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಕೋಟೆ ಸೋಮಣ್ಣ, ನಗರದ ಹೃದಯ ಭಾಗ ದಲ್ಲಿರುವ ದೀಪಾನರ್ಸಿಂಗ್ ಹೋಂ ರಸ್ತೆ ಕೆಳಭಾಗದ ಬೈಪಾಸ್ ರಸ್ತೆಯಲ್ಲಿ ಹೊಸದಾಗಿ ಕಳೆದ ಎರಡು ತಿಂಗಳಿಂದ ದಿಡೀರ್ ಹೊಸ ಶಾಲೆಯು ವಾಣಿಜ್ಯ ಸಂಕೀರ್ಣದಲ್ಲಿ ನರ್ಸರಿಯಿಂದ ಎಂಟನೇ ತರಗತಿವರೆಗೂ ದಾಖಲಾತಿ ಕೋರಿ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಎಂದರು.