ಅನಧಿಕೃತ ವೈನ್ ಫ್ಯಾಕ್ಟರಿ ತೆರವುಗೊಳಿಸಿ

bkt-9-6
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
Published on

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮದ ಗೋಮಾಳ ಜಾಗೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವೈನ ಫ್ಯಾಕ್ಟರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಕೊಣ್ಣೂರು ಗ್ರಾಮದ ಸರ್ವೇ ನಂ.೯೯/೨ ರಲ್ಲಿ ೪೯೩ ಎಕರೆ ಜಮೀನು ಅನಧಿಕೃತವಾಗಿ ಖರೀದಿ ಮಾಡಿ ರಾಹುಲ್ ರಾಚಪ್ಪ ಕುಲ್ಲೋಳ್ಳಿ ಹಾಗೂ ಸಹೋದರರು ಅಕ್ರಮವಾಗಿ ಬ ಕರಾಬಿನ ಆಸ್ತಿ ಖರೀದಿಸಿ ವೈನ ಫ್ಯಾಕ್ಟರಿ ಮಾಡಲು ಮುಂದಾಗಿದ್ದರು. ೨೦೨೧ ಜ.೩ ರಿಂದ ೭ ವರೆಗೆ ಐದು ದಿನಗಳ ವರೆಗೆ ಉಪವಾಸ ಕೈಗೊಂಡು ಹೋರಾಟ ಮಾಡಲಾಗಿತ್ತು. ಈ ವೇಳೆ ತಹಸೀಲ್ದಾರ ಇಂಗಳೇ ಅವರು ಆರು ತಿಂಗಳಿನಲ್ಲಿ ಕಟ್ಟಡ ತೆರವುಗೊಳಿಸುತ್ತೇವೆ. ಹೋರಾಟ ಕೈ ಬಿಡಿ ಎಂದರು. ಗ್ರಾಮಸ್ಥರು ಹೋರಾಟ ಮುಕ್ತಾಯಗೊಳಿಸಿದರು. ಆದರೇ ಇಲ್ಲಿಯ ವರೆಗೆ ಜಿಲ್ಲಾಡಳಿತ, ತಾಲೂಕಾ ಆಡಳಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕಟ್ಟಡ ಮಾಲೀಕರಿಂದ ನಿತ್ಯವು ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಕೂಡಲೇ ಇದಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ನಾವೇ ಅನಽಕೃತ ಕಟ್ಟಡ ತೆರೆವುಗೊಳಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಮುಖಂಡರಾದ ಕರಿಯಪ್ಪ ಕೋಟಿ, ಜಯಗೊಂಡ ದಡ್ಡಿ, ಭೀಮಪ್ಪ ಸುಣಗಾರ, ಸಿದ್ದು ಗಿರಗಾಂವಿ, ಶಿವರಾಯ ಅಬ್ಬಿನವರ, ಗದಿಗೆಪ್ಪ ಧಾರವಾಡ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net