ಅನಧಿಕೃತ ಬ್ಯಾನರ್‌ಗಳ ತೆರವು

flex
Published on

ನೆಲಮಂಗಲ: ನಗರದಲ್ಲಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಸ್ಕೈವಾಕ್‌ನಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಬ್ಯಾನರ್‌ಗಳನ್ನು ಪೊಲೀಸರು ಹಾಗೂ ಟೋಲ್ ಸಿಬ್ಬಂದಿ ತೆರವುಗೊಳಿಸಿದರು.

ಬೆಂಗಳೂರು- ತುಮಕೂರು ರಾ.ಹೆದ್ದಾರಿ-48 ಹಾಗೂ ಬೆಂಗಳೂರು- ಮಂಗಳೂರು ರಾ.ಹೆದ್ದಾರಿ-75ರ ಮಧ್ಯೆ ಹಾಗೂ ಸ್ಕೈವಾಕ್ ಸೇರಿ ಮೇಲ್ಸೇತುವೆ ಮೇಲೆ ಕೆಲ ಖಾಸಗಿ ಕಂಪನಿಗಳು ಹಾಗೂ ರಾಜಕೀಯ ಮುಖಂಡರು ಅನಧಿಕೃತವಾಗಿ ಬ್ಯಾನರ್ ಅಳವಡಿಸಿದ್ದರು. ಮಳೆ, ಗಾಳಿ ಬೀಸಿದಾಗ ಬ್ಯಾನರ್‌ಗಳಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಬ್ಯಾನರ್ ತೆರವುಗೊಳಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಚಾರಿ ಹಾಗೂ ಸಿವಿಲ್ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. 3 ಗಂಟೆ ಕಾರ್ಯಾಚರಣೆ: ರಾ.ಹೆದ್ದಾರಿ-48ರ ನವಯುಗ ಟೋಲ್‌ನಿಂದ ದಾಬಸ್‌ಪೇಟೆ ಗಡಿವರೆಗೂ ಹಾಗೂ ರಾ.ಹೆದ್ದಾರಿ-75ರ ಕುಣಿಗಲ್ ವೃತ್ತದಿಂದ ಮಹದೇವಪುರ ಗ್ರಾಮದವರೆಗೂ ಸುಮಾರು 3 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿತ್ತು. ನೆಲಮಂಗಲ ನಗರದಲ್ಲಿನ ರಾ.ಹೆದ್ದಾರಿ- 48ರ ತುಮಕೂರು ರಸ್ತೆಯ ಸ್ಕೈವಾಕ್‌ನಲ್ಲಿನ ಅನಧಿಕೃತ ಬ್ಯಾನರ್‌ಗಳನ್ನು ಟೋಲ್ ಸಿಬ್ಬಂದಿ ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net