

ಶಿಡ್ಲಘಟ್ಟ: ಪರವಾನಗಿ ಪಡೆಯದೆ ಕಾರ್ಯನಿರ್ವಹಣೆ ಹಾಗೂ ದುರ್ನಾತಕ್ಕೆ ಕಾರಣವಾಗಿದ್ದ ನ್ಯಾಯಾಲಯ ಸಂಕೀರ್ಣದ ಸಮೀಪದಲ್ಲಿನ ರೇಷ್ಮೆ ಪೀಪಾ ಟಕಕ್ಕೆ ನಗರಸಭೆ ಅಧಿಕಾರಿಗಳು ಸೋಮವಾರ ಬೀಗ ಜಡಿದಿದ್ದಾರೆ. ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು ಯಂತ್ರಗಳು ಹಾಗೂ ಇತರ ಪರಿಕರಗಳನ್ನು ತೆರವು ಮಾಡಲು 24 ಗಂಟೆಗಳ ಗಡುವು ನೀಡಿದ್ದಾರೆ.
ಅಮ್ಜದ್ ಎನ್ನುವವರಿಗೆ ಸೇರಿದ ಪೀಪಾ ಘಟಕಕ್ಕೆ ನಗರಸಭೆ, ಪರಿಸರ ವಾಲಿನ್ಯ ಮಂಡಳಿ ಸೇರಿ ಸಂಬಂಧಿಸಿದ ಇಲಾಖೆ, ಪ್ರಾಧಿಕಾರಿಗಳಿಂದ ಅನುಮತಿ ಪಡೆದಿರಲಿಲ್ಲ. ಜತೆಗೆ ವಸತಿ ಪ್ರದೇಶಗಳ ನಡುವೆಯೆ ಇದ್ದ ಈ ಟಕದಿಂದ ನ್ಯಾಯಾಲಯದ ಸಂಕೀರ್ಣದವರೆಗೂ ದುರ್ನಾತ ಹರಡುತ್ತಿದ್ದರಿಂದ ನ್ಯಾಯಾಧೀಶರು, ವಕೀಲರು, ಸಾರ್ವಜನಿಕರು ಹಲವು ಬಾರಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೌರಾಯುಕ್ತ ಆರ್.ಶ್ರೀಕಾಂತ್ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ನಗರಠಾಣೆ ಪೊಲೀಸರ ಟಕಕ್ಕೆ ಬೀಗ ಜಡಿದಿದ್ದು, ವಾಲೀಕರ ಮನವಿ ಮೇರೆಗೆ ಯಂತ್ರಗಳನ್ನು ಸಾಗಿಸಲು ಒಂದು ದಿನದ ಕಾಲಾವಕಾಶ ನೀಡಿದ್ದಾರೆ.
ಸಂಬಂಧಿಸಿದ ಇಲಾಖೆ, ಪ್ರಾಧಿಕಾರಿಗಳಿಂದ ಅನುಮತಿ ಪಡೆಯದ ಇನ್ನೂ ಹಲವು ಪೀಪಾ ಟಕಗಳು ಶಿಡ್ಲಟ್ಟದಲ್ಲಿವೆ. ಜನ ವಸತಿ ಪ್ರದೇಶಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದು, ಹೊರ ಸೂಸುವ ದುರ್ನಾತ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಹಂತ ಹಂತವಾಗಿ ಇಂತಹ ಟಕಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಆರ್.ಶ್ರೀಕಾಂತ್, ಪೌರಾಯುಕ್ತ