

ನೆಲಮಂಗಲ: ತಾಲೂಕಿನ ಬೂದಿಹಾಲ್ ಗ್ರಾಪಂನ ಅನಂತಪುರದಿಂದ ಕಣೇಗೌಡನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೆ ಮಂಗಳವಾರ ಚಾಲನೆ ದೊರೆತಿದೆ.
ಹದಗೆಟ್ಟಿದ್ದ ಅನಂತಪುರದ ರಸ್ತೆಯಲ್ಲಿ ವಾಹನ ಸವಾರರ ಪರದಾಟದ ಬಗ್ಗೆ ಸೆ.7 ರಂದು ವಿಜಯವಾಣಿಯಲ್ಲಿ ಹದಗೆಟ್ಟ ರಸ್ತೆ ದುರಸ್ತಿ ಮಾಡದ ಅಧಿಕಾರಿಗಳು ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ.
ರಸ್ತೆ ಸಂಪೂರ್ಣ ಹದಗೆಟ್ಟು ಅನೇಕ ವರ್ಷ ಕಳೆದರೂ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಗಮನಹರಿಸಿರಲಿಲ್ಲ. 2 ಕಿಮೀ ರಸ್ತೆಯುದ್ದಕ್ಕೂ ಗುಂಡಿ ಬಿದ್ದು ಕೆಸರು ಗದ್ದೆಯಂತಾಗಿತ್ತು.
ರಸ್ತೆ ಸಮಸ್ಯೆ ಬಗ್ಗೆ ಪಂಚಾಯಿತಿ ಗಮನಕ್ಕೆತಂದರೇ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದರು. ವಿಜಯವಾಣಿಯಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಸಮಸ್ಯೆ ಬಗ್ಗೆ ಹರಿದಿದ್ದು, ಪತ್ರಿಕೆಯ ಸಾಮಾಜಮುಖಿ ಕಾರ್ಯವನ್ನು ಮುಖಂಡ ಮುನೇಯಶ್ಯ ಶ್ಲಾಸಿದರು. ಮುಖಂಡರಾದ ಕಿರಣ್, ಸತೀಶ್‌ಕುಮಾರ್, ವಿ.ರವಿಕುಮಾರ್, ರವಿಶಂಕರ್, ವಿ.ಚಂದ್ರಶೇಖರ್, ಎಂ.ರಘು, ಪುರುಷೋತ್ತಮ್,ಚೇತನ್, ಮತ್ತಿತರರು ಉಪಸ್ಥಿತರಿದ್ದರು.
ಅನಂತಪುರದ ಮುಖ್ಯರಸ್ತೆ ಅವ್ಯವಸ್ಥೆ ಪರಿಶೀಲಿಸಿ ಸಾರ್ವಜನಿಕರು ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ಶಾಸಕರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು. ಮುನಿರಾಜು, ಗ್ರಾಪಂ ಅಧ್ಯಕ್ಷ