ಅನಂತನಾಗ್ ಸಹಜ ಅಭಿನಯದ ಪ್ರತಿಭೆ

14 ckm 1
ಚಿಕ್ಕಮಗಳೂರಿನ ಮಲೆನಾಡು ವಿದ್ಯಾಸಂಸ್ಥೆಯ ಸಹಭಾಗಿತ್ವದಲ್ಲಿ ಎಂಇಎಸ್ ಕಾಲೇಜು ಆವರಣದಲ್ಲಿ ನಡೆದ ಪೂರ್ವಿ ಗಾನಯಾನ-೧೦೭ರ `ಅನಂತಗಾನ ಕಾರ್ಯಕ್ರಮದಲ್ಲಿ ಗಾಯಕಿ ಪ್ರಣಮ್ಯ ಕಶ್ಯಪ್ ಅವರನ್ನು ಅಭಿನಂದಿಸಲಾಯಿತು. ಡಾ.ಸಿ.ಕೆ.ಸುಬ್ಬರಾಯ, ಎಂ.ಆರ್.ದೇವರಾಜಶೆಟ್ಟಿ, ಎಂ.ಎಸ್.ಸುಧೀರ್, ಸುಮಾ ಪ್ರಸಾದ್, ರೂಪಾ ನಾಯ್ಕ, ಚೇತನ್ ರಾಮ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅನಂತನಾಗ್ ಎಲ್ಲ ಕಾಲಕ್ಕೂ ಸಲ್ಲುವ ಬಹುಮುಖ ಪ್ರತಿಭೆಯ ನಟ. ಕನ್ನಡ, ಹಿಂದಿ ಸೇರಿದಂತೆ ಐದಾರು ಭಾಷೆಗಳಲ್ಲಿ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆದಿದ್ದಾರೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟಾçರ್ ಡಾ.ಸಿ.ಕೆ.ಸುಬ್ಬರಾಯ ಅಭಿಪ್ರಾಯಪಟ್ಟರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಮಲೆನಾಡು ವಿದ್ಯಾಸಂಸ್ಥೆಯ ಸಹಭಾಗಿತ್ವದಲ್ಲಿ ಎಂಇಎಸ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಖ್ಯಾತ ನಟ ಪದ್ಮಭೂಷಣ ಅನಂತನಾಗ್ ಗೀತೆಗಳ ವಿಶೇಷ ಪೂರ್ವಿ ಗಾನಯಾನ-೧೦೭ರ `ಅನಂತಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನಂತನಾಗ್ ವ್ಯಾಸಂಗ ಮಾಡುತ್ತಿರುವಾಗಲೇ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಅನಂತರದಲ್ಲಿ ಸಿನಿಮಾ ರಂಗ ಹಾಗೂ ಕಿರಿತೆರೆಯಲ್ಲಿ ಕೂಡ ತಮ್ಮ ಅಭಿನಯ ಪ್ರತಿಭೆಯ ಛಾಪೊತ್ತಿದ ಮಹಾನ್ ಕಲಾವಿದ. ಅವರ ನಟನಾ ಶೈಲಿಯಿಂದ ಅನೇಕ ಉದಯೋನ್ಮುಖ ನಟರು ಸ್ಫೂರ್ತಿ ಪಡೆದುಕೊಂಡಿದ್ದಾರೆ. ಅವರೋರ್ವ ಪ್ರಬುದ್ಧ ನಟರಾಗಿ ನಾಡಿಗೆ, ವಿಶ್ವಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಮಾತನಾಡಿ, ನಗರದ ಅನೇಕ ಯುವ ಪ್ರತಿಭೆಗಳಿಗೆ ತಮ್ಮ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್.ಸುಧೀರ್ ಅವಕಾಶ ನೀಡಿ ಬೆಳೆಸಿದ್ದಾರೆ ಎಂದು ಶ್ಲಾಘಿಸಿದರು.

ಅಭಿನಂದನೆ ಸ್ವೀಕರಿಸಿದ ಗಾಯಕಿ ಪ್ರಣಮ್ಯ ಕಶ್ಯಪ್ ಮಾತನಾಡಿ, ತಾವು ೫ನೇ ತರಗತಿ ವ್ಯಾಸಂಗ ಮಾಡುವ ಕಾಲಕ್ಕೆ ಚಿಕ್ಕಮಗಳೂರಿಗೆ ಬಂದಿದ್ದು, ಎಳವೆಯಿಂದ ಸಂಗೀತದ ಆಸಕ್ತಿ ಮೂಡಿತ್ತು. ಕರ್ನಾಟಕ ಶಾಸ್ತಿçÃಯ ಸಂಗೀತ ಕಲಿಯುವುದರ ಜೊತೆಗೆ ಸುಗಮ ಸಂಗೀತ ಕಲಿಕೆಯಲ್ಲಿ ಕೂಡ ತೊಡಗಿಸಿಕೊಂಡಿದ್ದು, ಅದಕ್ಕೆ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ನ ಮುಖ್ಯಸ್ಥ ಎಂ.ಎಸ್.ಸುಧೀರ್ ಅವಕಾಶ ನೀಡಿ ಪ್ರೋತ್ಸಾಹಿಸಿದರು. ಈ ನಗರದಲ್ಲಿ ಶಾಸ್ತಿçÃಯ ಸಂಗೀತಕ್ಕೆ ಉತ್ತೇಜನ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೂ ಹೆಚ್ಚು ಅವಕಾಶ ವಿಸ್ತರಣೆಯಾಗಬೇಕೆನ್ನುವುದು ತಮ್ಮ ಆಶಯ ಎಂದು ಹೇಳಿದರು.

ಮಲೆನಾಡು ವಿದ್ಯಾಸಂಸ್ಥೆಯ ನಿರ್ದೇಶಕಿ ಜಯಶ್ರೀ ಜೋಷಿ, ಗಾಯಕರಾದ ಸುಮಾ ಪ್ರಸಾದ್, ರೂಪಾ ನಾಯ್ಕ್ ಉಪಸ್ಥಿತರಿದ್ದರು. ಗಾಯಕ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ಗಾಯಕರಾದ ಚೇತನ್‌ರಾಮ್, ದೀಪಕ್ ಪಿ.ಎಸ್., ರೂಪ ಅಶ್ವಿನ್, ಅನುಷ, ಸುಂದರ ಲಕ್ಷ್ಮೀ, ಚೈತನ್ಯ, ಪ್ರಣಮ್ಯ, ಪೃಥ್ವಿಶ್ರೀ ಅವರು ಅನಂತನಾಗ್ ಅಭಿನಯದ ಚಲನಚಿತ್ರಗಳ ವೈವಿಧ್ಯಮಯ ಗೀತೆಗಳಿಗೆ ಧ್ವನಿಯಾಗಿ ಸಭಿಕರನ್ನು ರಂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net