ಅನಂತಕುಮಾರ್ ಹೆಗಡೆಗೆ ಬುದ್ಧಿ ಭ್ರಮಣೆಯಾಗಿದೆ

D SUDAKAR D HYR
Published on

ಚಿತ್ರದುರ್ಗ: ಸಂಸದ ಅನಂತಕುಮಾರ್ ಹೆಗಡೆಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ನಗರದಲ್ಲಿ ಮಂಗ ಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಹೇಳಿಕೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ನಾ ನು ಹೆಚ್ಚು ಮಾತನಾಡುವುದಿಲ್ಲ.
ನಾಲ್ಕು ವರ್ಷಗಳ ಕಾಲ ಮನೆಯಲ್ಲಿ ಇದ್ದಿದ್ದರಿಂದಾಗಿ ಹೆಗಡೆ ಹೀಗೆ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾ ರೆ. ಹಿಂದು-ಮುಸ್ಲಿಂರ ಭಾವೈಕ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಜಾತಿ, ಧರ್ಮದ ವಿಷ ಬೀಜ ಬಿತ್ತುತ್ತಿರುವ ಬಿಜೆಪಿ ತನ್ನ ಈ ಕೆಲಸದಲ್ಲಿ ಯಾವತ್ತೂ ಯಶಸ್ವಿಯಾಗಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತಾಡಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರು, ಸಿದ್ದರಾಮಯ್ಯ ಎಲ್ಲರಿಗೂ ಗೌರವ ಕೊಡುವ ವ್ಯಕ್ತಿಯಾಗಿದ್ದಾರೆ. ಅನಂತಕುಮಾರ್ ಸಭ್ಯತೆ ಕಲಿತುಕೊಳ್ಳಬೇಕಿದೆ. ಇನ್ನೂ ಮೂರು ಡಿಸಿಎಂ ಹುದ್ದೆಗಳ ವಿಚಾರ ಮುಗಿದು ಹೋದ ಅಧ್ಯಾಯ. ಅದರ ಬಗ್ಗೆ ಮಾತನಾಡದಂತೆ ಹೈಕಮಾಂಡ್ ಹೇಳಿದೆ.
ಚಿತ್ರದುರ್ಗದಲ್ಲಿ ಶೋಷಿತ, ಹಿಂದುಳಿದ ಸಮುದಾಯಗಳ ಬೃಹತ್ ಸಮಾವೇಶ ನಡೆಯಲಿ. ಯಾರೂ ಯಾವುದೇ ಕಾರ್ಯಕ್ರಮ ಮಾಡಬ ಹುದೆಂದರು. ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗೋಶಾಲೆಗಳ ಆರಂಭಕ್ಕೆ ಸಿದ್ಧತೆ ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net