ಅನಂತಕುಮಾರ ಸ್ಮರಣೆಯಲ್ಲಿ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಿ

cricket
Published on

ಬೀದರ್: ಕೇಂದ್ರ ಸಚಿವ ದಿ.ಅನಂತಕುಮಾರ ಅವರ ಸವಿನೆನಪಿನಲ್ಲಿ ಇಲ್ಲಿಯ ಅಜಯ್ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಸೋಮವಾರ ಕಮಠಾಣ ಹತ್ತಿರದ ಪಶು ವೈದ್ಯಕೀಯ ವಿಶ್ವದ್ಯಾಲಯದ ಮೈದಾನದಲ್ಲಿ ಚಾಲನೆ ನೀಡಲಾಗಿದೆ.

ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ ಉದ್ಘಾಟಿಸಿ ಮಾತನಾಡಿ, ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಅವಶ್ಯ. ಓದಿನ ಜತೆಯಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಹ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಟೂರ್ನಿಯಲ್ಲಿ ವಿವಿಧೆಡೆಯ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಮೊದಲ ಬಹುಮಾನದ ಹಣವನ್ನು ನಾನು ವಯಕ್ತಿಕವಾಗಿ ನೀಡುವೆ ಎಂದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ಅವರು ಮಾತನಾಡಿ, ಅನಂತಕುಮಾರ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯವಿದೆ. ಅವರ ಸವಿನೆನಪಿನಲ್ಲಿ ಟೂರ್ನಿ ಆಯೋಜಿಸಿರುವುದು ಸಂತಸದ ಸಂಗತಿ. ದ್ವಿತೀಯ ಹಾಗೂ ತೃತೀಯ ಬಹುಮಾನ ಮೊತ್ತ ನಾನು ನೀಡುವೆ ಎಂದು ಘೋಷಿಸಿದರು.

ಸಂಸದ ಭಗವಂತ ಖೂಬಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಮುಖರಾದ ಕುಶಾಲರಾವ ಪಾಟೀಲ್ ಗಾದಗಿ, ಈಶ್ವರಸಿಂಗ ಠಾಕೂರ್, ಸುರೇಶ ಮಾಶೆಟ್ಟಿ, ಹಣಮಂತ ಬುಳ್ಳಾ, ಶಶಿ ಹೊಸಳ್ಳಿ ಇತರರಿದ್ದರು. ಆಯೋಜಕ ರಾಜು ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜ.2ರಂದು ಟೂರ್ನಿ ಸಮಾರೋಪ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net