ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

23 vikram 6
Published on

ವಿಯವಾಣಿ ಸುದ್ದಿಜಾಲ ಧಾರವಾಡ

ಪ್ರಸ್ತುತ ಸನ್ನಿವೇಶದಲ್ಲಿ ಸಂಶೋಧನೆ ಮತ್ತು ಶೈಕ್ಷಣಿಕ ಪ್ರಾವಿಣ್ಯತೆ ಹೆಚ್ಚು ಸಂಯೋಜಿತವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ನಗರದ ಎಸ್​ಡಿಎಂ ಇಂಜಿನಿಯರಿಂಗ್​ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನವೀನ ಶಿಕ್ಷಣ ಸಂಶೋಧನೆ ಮತ್ತು ಪ್ರಕಾಶನ ಕೌಶಲ್ಯಗಳು ಎಂಬ ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸಂಶೋಧನೆಯಲ್ಲಿ ಎಐ ತಂತ್ರಗಳನ್ನು ಬಳಸುವ ಆಧುನಿಕ ಪರಿಕರಗಳ ಬಳಕೆ ಹೆಚ್ಚು ಆಕರ್ಷಕ ಮತ್ತು ನವೀನವಾಗಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವಲ್ಲಿ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಹೆಚ್ಚು ಪರಿಣಾಮಕಾರಿ ಪ್ರದರ್ಶಕರಾಗುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದರು.

ಡಾ. ಎಸ್​.ಜಿ. ಅಂಕಲಿಕಿ, ಎಸ್​ಡಿಎಂ ಶಿಕ್ಷಣ ಸಂಘದ ಕಾರ್ಯದರ್ಶಿ ಜೀವಂಧರಕುಮಾರ ಮಾತನಾಡಿದರು. ಐಐಟಿ ಧಾರವಾಡದ ಡಾ. ರಾಹುಲ್​ ಪಾಂಡ್ಯ, ಡಾ. ಶ್ರವಣ್​ ನಾಯಕ್​, ಶಿಕ್ಷಕರು, ಇತರರು ಇದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ ಚಕ್ರಸಾಲಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net