ಅಧ್ಯಾತ್ಮದಿಂದ ಬದುಕು ಅರ್ಥಪೂರ್ಣ

14Telasanga1
Published on

ತೆಲಸಂಗ: ಅಕ್ಷರ ಹಾಗೂ ಅಧ್ಯಾತ್ಮದ ಜ್ಞಾನಾರ್ಜನೆಯಿಂದ ಬದುಕು ಅರ್ಥಪೂರ್ಣವಾಗಲಿದೆ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

ಗ್ರಾಮದ ಹಿರೇಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿ, ಯುವಜನತೆ ಅಧ್ಯಾತ್ಮದಿಂದ ದೂರವಾಗಿ ಆತ್ಮವಿಶ್ವಾಸ, ಬದುಕಿನ ಮೌಲ್ಯ ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ. ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಯುವಜನರು ಸಾಮಾಜಿಕ ಜಾಲತಾಣದ ಗೀಳಿನಿಂದ ಹೊರಬರಬೇಕು ಎಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಧರೆಪ್ಪ ದಳವಾಯಿ ಮಾತನಾಡಿ, ಅರ್ಥಪೂರ್ಣ ಬದುಕಿಗೆ ಆಧ್ಯಾತ್ಮಿಕ ಚಿಂತನೆ ಹಾಗೂ ವೈಚಾರಿಕ ಬುನಾದಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಚಿಕ್ಕೋಡಿ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದ ರಮೇಶ ಸಜ್ಜನ, ಶಿಕ್ಷಕರ ಸಹಕಾರಿ ಸಂಘಕ್ಕೆ ಸದಸ್ಯರಾಗಿ ಆಯ್ಕೆಯಾದ ಶಿಕ್ಷಕ ವಿಠ್ಠಲ ಶೆಲ್ಲೆಪ್ಪಗೋಳ, ಶಿಕ್ಷಕ ಧರೆಪ್ಪ ದಳವಾಯಿ ಅವರನ್ನು ಸತ್ಕರಿಸಲಾಯಿತು.

ಹಿರಿಯರಾದ ಶರಣಪ್ಪ ಅವಟಿ, ಅಶೋಕ ಪರುಶೆಟ್ಟಿ, ಮುತ್ತು ಡೆಂಗಿ, ಶ್ರುತಿ ದಶಮಾ, ಕಮಲಕ್ಕ ಕೋರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net