ಅಧ್ಯಾತ್ಮದ ತುತ್ತತುದಿ ಏರಿದ ವಿಶ್ವಾರಾಧ್ಯರು

15ydg05
Published on

ಯಾದಗಿರಿ: ಅಂಬಲಿಯನ್ನು ಮಾಡಬೇಕಾದರೆ ಎಂಬಲಿ ಇಡಬೇಕಾಗುತ್ತದೆ. ಆದರೆ ಸದ್ಗುರು ವಿಶ್ವರಾಧ್ಯರು ಹಂಬಲದ ಅಂಬಲಿಯನ್ನು ಕುಡಿದ ಘನ ಮಹಿಮರಾಗಿದ್ದಾರೆ ಎಂದು ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

ಶುಕ್ರವಾರ ತಾಲೂಕಿನ ಪ್ರಸಿದ್ಧ ಯಾತ್ರಾಕ್ಷೇತ್ರ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಮಠದಲ್ಲಿ ನಡೆದ ಶ್ರಾವಣ ಮಾಸದ ಕಾರ್ಯಕ್ರಮಗಳ ಮಂಗಲೋತ್ಸವದ ಸಾನಿಧ್ಯ ವಹಿಸಿ ಹಿತೋಪದೇಶ ನೀಡಿ, ಸಾಧನೆಯ ಸಿದ್ಧಿಯನ್ನು ಮುಟ್ಟಿದ ವಿಶ್ವರಾಧ್ಯರು ಅಬ್ಬೆತುಮಕೂರಿನಲ್ಲಿ ನೆಲೆ ನಿಂತ ಮೇಲೆ ಅಧ್ಯಾತ್ಮದ ತುತ್ತತುದಿಯನ್ನು ಏರಿದವರು ಎಂದರು.

ಒಮ್ಮೆ ತಮ್ಮ ಶಿಷ್ಯ ಸಕ್ರಪ್ಪಗೌಡರಿಗೆ ವಿಶ್ವಾರಾಧ್ಯರು ಅಂಬಲಿ ಕುಡಿಯಬೇಕಾಗಿದೆ ಎನ್ನುತ್ತಾರೆ. ಅದು ಆಗಿಂದಾಗ್ಗೆ ಮಾಡಲಾಗದು. ಎಂಬಲ್ಲಿಡಬೇಕಾಗುತ್ತದೆ ಎನ್ನುತ್ತಾರೆ ಶಿಷ್ಯ. ಆಗ ಗುರುಗಳು ಇಲ್ಲಿ ಮುಂದುಗಡೆ ಒಬ್ಬ ಮಹಿಳೆ ಹೋಗುತ್ತಿದ್ದಾಳೆ. ಅವಳ ಗಡಿಗೆಯಲ್ಲಿರುವ ಅಂಬಲಿಯನ್ನು ತೆಗೆದುಕೊಂಡು ಬಾ ಎಂದು ಆಜ್ಞೆ ಮಾಡುತ್ತಾರೆ. ಆ ಮಹಿಳೆಯ ಅಂಬಲಿಯನ್ನುತಂದುಕೊಟ್ಟಾಗ ಹಂಬಲದಿಂದ ಕುಡಿದ ವಿಶ್ವಾರಾಧ್ಯರು ಸಂತೃಪ್ತರಾಗುತ್ತಾರೆ ಎಂದರು.

ಅಂಬಲಿ ಕುಡಿದ ವಿಶ್ವರಾಧ್ಯರು, ಆ ಗಡಿಗೆ ಮನೆಯಲ್ಲಿ ಜೋಪಾನವಾಗಿ ಇಟ್ಟುಕೊಳ್ಳುವಂತೆ ಮಹಿಳೆಗೆ ತಿಳಿಸುತ್ತಾರೆ. ಅದರಂತೆ ಆ ಹೆಣ್ಣುಮಗಳು ಮನೆಯಲ್ಲಿ ಗಡಿಗೆ ಇಟ್ಟು ಭಕ್ತಿಯಿಂದ ಪೂಜಿಸಿದಾಗ ಅವರ ಮನೆಯಲ್ಲಿ ಸಂಪತ್ತು ವೃದ್ಧಿಸುತ್ತದೆ ಎಂದು ಗುರುಗಳ ಪವಾಡಗಳನ್ನು ಭಕ್ತರಿಗೆ ವಿವರಿಸಿದರು.

ವಿಶ್ವಾರಾಧ್ಯರು ಹೀಗೆ ತಮ್ಮ ಜೀವಿತಾವಯಲ್ಲಿ ಅನೇಕ ಪವಾಡಗಳನ್ನು ಮಾಡುತ್ತಾ, ತಮ್ಮಲ್ಲಿಗೆ ಅರಸಿ ಬರುವ ಭಕ್ತರನ್ನು ಉದ್ದರಿಸುತ್ತ, ಜನತೆಯ ಕಾಳಿಕೆಯನ್ನು ಕಳೆದು ಅವರು ಬದುಕಿನಲ್ಲಿ ಸಂತೃಪ್ತದಿಂದ ಬಾಳುವಂತೆ ಹರಸಿದ್ದಾರೆ ಎಂದರು.

ಶ್ರೀಮಠದಲ್ಲಿ ಬೆಳಿಗ್ಗೆ ವಿವಿಧ ಮಂಗಳವಾದ್ಯಗಳೊಂದಿಗೆ ಭೀಮ ನದಿಗೆ ತೆರಳಿ ಗಂಗಾಸ್ನಾನ ನೆರವೇರಿಸಿಕೊಂಡು ಬರಲಾಯಿತು. ತರುವಾಯ ಗೋರಟಾ ಸಂಗೀತ ಬಳಗದಿಂದ ವಿಶ್ವಾರಾಧ್ಯರ ಗದ್ದುಗೆಗೆ ವಿಶೇಷ ಮಹಾ ರುದ್ರಾಭಿಷೇಕ ಮಾಡಲಾುತು.

ಭಕ್ತರಾದ ಸಿದ್ದರಾಮ ಮೇತ್ರೆ, ಮಂಜುನಾಥ ಪಾಟೀಲ, ಸಂತೋಷ ಪಾಟೀಲ, ಅಭಿಷೇಕ್, ಶ್ರದ್ಧಾ ಬೋರಕರ್, ಸ್ನೇಹಲ್ ಮೇತ್ರೆ ಅವರು ಸ್ವಾಮಿಗಳ ಪಾದಪೂಜೆಯನ್ನು ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net