ಅಧ್ಯಯನದೊಂದಿಗೆ ಶಿಸ್ತು, ಸಂಸ್ಕಾರವೂ ಮುಖ್ಯ

25Jaggu10
ಬೆಳಗಾವಿ ನಗರದ ಚಂದ್ರಗಿರಿ ಮಹಿಳಾ ಬಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ರ‌್ಯಾಂಕ್ ವಿಜೇತೆ ಗೀತಾ ಚಿನಗಿ ಅವರನ್ನು ಸನ್ಮಾನಿಸಲಾಯಿತು. ಡಾ. ಅಲ್ಲಮಪ್ರಭು ಸ್ವಾಮೀಜಿ, ಕೆ.ಬಿ. ಹಿರೇಮಠ, ಡಾ. ಬಿ.ಜಿ. ಧಾರವಾಡ, ಡಾ. ಎ.ಎಲ್. ಪಾಟೀಲ ಇತರರಿದ್ದರು.
Published on

ಬೆಳಗಾವಿ: ಸತತ ಅಧ್ಯಯನದೊಂದಿಗೆ ವಿದ್ಯಾರ್ಥಿಗಳು ಶಿಸ್ತು, ಸಂಸ್ಕಾರ ಅಳವಡಿಸಿಕೊಂಡಾಗ ಮಾತ್ರ ಬದುಕು ಶ್ರೀಮಂತವಾಗಿಸಿಕೊಳ್ಳಲು ಸಾಧ್ಯ ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ನಗರದ ಚಂದ್ರಗಿರಿ ಮಹಿಳಾ ಬಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ದೀಪದಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ಸುಭದ್ರ ದೇಶ ಕಟ್ಟುವ ಶಿಲ್ಪಿ. ಅದನ್ನು ನಾವು ಅರಿತಿರಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ರ‌್ಯಾಂಕ್ ವಿಜೇತೆ ಗೀತಾ ಚಿನಗಿ ಅವರನ್ನು ಸನ್ಮಾನಿಸಲಾಯಿತು. ಕೆ.ಎಸ್.ಆರ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ. ಧಾರವಾಡ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಎ.ಎಲ್.ಪಾಟೀಲ ಸ್ವಾಗತಿಸಿದರು. ಜಯಶ್ರೀ ಕೆಂಗೇರಿ ವರದಿ ವಾಚಿಸಿದರು. ನಂದಿನಿ ಕಾಂಬಳೆ ನಿರೂಪಿಸಿದರು. ಡಾ. ಶಿವಕುಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net