ಅಧ್ಯಯನದಲ್ಲಿ ವಿನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಿ

PH 08
Published on

ಕಲಬುರಗಿ: ವಿನೂತನ ತಂತ್ರಜ್ಞಾನ, ಸರಳ ಸಂಕೇತಗಳನ್ನು ಬಳಸಿಕೊಂಡು ಅಧ್ಯಯನ ಮಾಡಿದಾಗಲೇ ರಸಾಯನಶಾಸ್ತç ಸರಳವಾಗಿ ಅರ್ಥವಾಗುತ್ತದೆ ಎಂದು ಹಾಸನದ ಎನ್‌ಡಿಆರ್‌ಕೆ ವಿದ್ಯಾಸಂಸ್ಥೆಯ ರಸಾಯನ ಶಾಸ್ತçದ ನಿವೃತ್ತ ಪ್ರಾಧ್ಯಾಪಕ ಎಚ್.ಎನ್.ಮಹಾದೇವ ಸಲಹೆ ನೀಡಿದರು.

ಚಂದ್ರಕಾಂತ ಪಾಟೀಲ್ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2 ದಿನಗಳ ಓರಿಯಂಟೇಶನ್ ಕಾರ್ಯಾಗಾರದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೀಟ್, ಜೆಇಇ, ಕೆಸಿಟಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸುವುದು ಅಗತ್ಯವಾಗಿದೆ. ನಿರ್ದಿಷ್ಟ ಗುರಿಯೊಂದಿಗೆ ಅಭ್ಯಾಸ ಮಾಡಬೇಕು. ವಿಷಯಗಳ ಪುನರ್ಮನನ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಪ್ರಾಂಶುಪಾಲ ಡಾ.ಆರ್. ಕೃಷ್ಣಮೂರ್ತಿ, ರಸಾಯನ ಶಾಸ್ತç ವಿಭಾಗದ ಮುಖ್ಯಸ್ಥ ಡಾ.ಬಸವಂತಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net