ಅಧ್ಯಯನ ಪ್ರವಾಸಕ್ಕೆ ಬಿತ್ತು ತಡೆ

7sgr6
ಸಾಗರ ನಗರಸಭೆ ಕಚೇರಿ.
Published on

ವಿಜಯವಾಣಿ ಸುದ್ದಿಜಾಲ ಸಾಗರ ನಗರಸಭಾ ಸದಸ್ಯರು ತಮ್ಮ ಅಕಾರಾವ ಮುಗಿಯುವ ಕೇವಲ 56 ದಿನ ಇರುವಾಗ 40 ಲಕ್ಷ ರೂ. ವೆಚ್ಚ ಮಾಡಿ ದೆಹಲಿ, ಹರಿಯಾಣ ರಾಜ್ಯಕ್ಕೆ ಅಧ್ಯಯನ ಪ್ರವಾಸ ಮಾಡಲು ಸಿದ್ಧತೆ ನಡೆಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿತ್ತಲ್ಲದೆ, ಪಕ್ಷಗಳಲ್ಲೇ ಪರ-ವಿರೋಧ ವ್ಯಕ್ತವಾಗಿತ್ತು. ಇದೀಗ ಪ್ರವಾಸಕ್ಕೆ ತಡೆ ಬಿದ್ದಂತಾಗಿದೆ. ನಗರಸಭೆಯ ಆಡಳಿತ ಪಕ್ಷ ಬಿಜೆಪಿಯ 16 ಸದಸ್ಯರು ಪ್ರವಾಸ ಹೋಗುವುದಿಲ್ಲ ಎಂದು ಸಾಮಾನ್ಯ ಸಭೆಯಲ್ಲೇ ಅಕೃತವಾಗಿ ಘೋಷಿಸಿದ್ದರು. ನಿರಂತರ ಮಳೆಯಿಂದ ಸಾಗರ ನಗರದ ರಸ್ತೆಗಳು ಗುಂಡಿ ಬಿದ್ದು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಮಳೆಯಿಂದ ಸಾಕಷ್ಟು ಮನೆಗಳು ಬಿದ್ದು, ಗೋಡೆಗಳು ಕುಸಿದು ಹಾನಿಯಾಗಿವೆ. ಇವುಗಳ ನಡುವೆ ನಗರಸಭಾ ಸದಸ್ಯರು ಪ್ರವಾಸಕ್ಕೆ ಸರ್ವಸಿದ್ಧತೆ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ ಟೀಕೆ ವ್ಯಕ್ತವಾಗಿತ್ತು. ಕೆಲವು ಸದಸ್ಯರು ಪ್ರವಾಸಕ್ಕೆ ಹೋಗಲೇಬೇಕೆಂದು ಹಠತೊಟ್ಟು ತೆರೆಮರೆಯಲ್ಲಿ ಬಹಳಷ್ಟು ಪ್ರಯತ್ನ ನಡೆಸಿದ್ದರು. ಕೊನೆಗೆ ಕಾಂಗ್ರೆಸ್‌ನ ಕೆಲವು ಸದಸ್ಯರು ನಾವು ಪ್ರವಾಸಕ್ಕೆ ತೆರಳಿದರೆ ಕೆಟ್ಟ ಹೆಸರು ಬರಲಿದೆ ಎಂದು ಅರಿತು ಜಾಣನಡೆ ಪ್ರದರ್ಶಿಸಿದ್ದಾರೆ. ನಾಮ ನಿರ್ದೇಶಿತರು ಸೇರಿದಂತೆ 36 ಜನ ಸದಸ್ಯರಿರುವ ನಗರಸಭೆಯಲ್ಲಿ ಕೆಲ ಸದಸ್ಯರು ಪ್ರವಾಸಕ್ಕೆ ಹೋಗಲು ಅಂತಿಮ ಪ್ರಯತ್ನನಡೆಸಿದರು. ಆದರೆ ಆಯುಕ್ತರು, ಅಧ್ಯಕ್ಷರು ಸೇರಿ ಬಹುತೇಕ ಸದಸ್ಯರು ಪಾಲ್ಗೊಳ್ಳದೆ ಇರುವುದರಿಂದ ಪ್ರವಾಸವನ್ನು ಅಂತಿಮವಾಗಿ ರದ್ದುಗೊಳಿಸಲಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಒಟ್ಟಾಗಿ ಅಧ್ಯಯನ ಪ್ರವಾಸ ತೆರಳಲು ಶಾಸಕರನ್ನು ಕೋರಲಾಗಿತ್ತು. ಬಿಜೆಪಿಯ ಸದಸ್ಯರು ಈ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು, ಈಗ ರದ್ದುಪಡಿಸಿದ್ದೇವೆ ಎಂದು ನಗರಸಭೆ ಅಧ್ಯಕ್ಷರು ತಿಳಿಸಿದ್ದಾರೆ. ಎಲ್ಲ ವಿಷಯಗಳಲ್ಲಿಯೂ ರಾಜಕಾರಣ ಮಾಡುವ ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ಗಣಪತಿ ಮಂಡಗಳಲೆ, ನಗರಸಭೆ ವಿಪಕ್ಷ ನಾಯಕ ನಮ್ಮ ಪಕ್ಷದಿಂದ 16 ಜನ ಸದಸ್ಯರು ಕೂಡ ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತೀರ್ಮಾನ ಕೈಗೊಂಡಾಗಿದೆ. ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ತೀರ ಕಡಿಮೆ ಸಂಖ್ಯೆಯಲ್ಲಿ ಸಮ್ಮತಿಸಿದ್ದರಿಂದ ಈ ಪ್ರವಾಸದ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಮೈತ್ರಿ ಪಾಟೀಲ್, ನಗರಸಭೆ ಅಧ್ಯಕ್ಷೆ, ಸಾಗರ ಅವ ಕಡಿಮೆಯಿದೆ. ನಾಮ ನಿರ್ದೇಶಿತ ಸದಸ್ಯರು ಸೇರಿ 36 ಜನ ಸದಸ್ಯರಿದ್ದು, ಕಡಿಮೆ ಸಂಖ್ಯೆಯಲ್ಲಿ ಸದಸ್ಯರು ಪ್ರವಾಸದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪ್ರವಾಸದ ಪ್ರಸ್ತಾವನೆ ಸ್ಥಗಿತಗೊಳಿಸಲಾಗಿದೆ. ಎಚ್.ಕೆ ನಾಗಪ್ಪ, ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net