ಅಧ್ಯಯನ ಪದವಿಪೂರ್ವ ಕಾಲೇಜು ವತಿಯಿಂದ ರಸ್ತೆ ಸುರಕ್ಷತೆ ಅರಿವು

06_HSN_05
Published on

ಹಾಸನ: ನಗರದ ಅಧ್ಯಯನ ಪದವಿಪೂರ್ವ ಕಾಲೇಜು ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ಅರಿವು ಹಾಗೂ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಶನಿವಾರ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಯಿಂದ ಹೇಮಾವತಿ ಪ್ರತಿಮೆವರೆಗೂ ಜಾಥಾ ನಡೆಸಲಾಯಿತು.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಾಸನ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಮಲ್ಲಿಕಾರ್ಜುನ್, ಅಶೋಕ್ ರವಿಚಂದನ್ ಮಕ್ಕಳಿಗೆ ರಸ್ತೆ ಸುರಕ್ಷತೆಯ ಅರಿವು ಹಾಗೂ ಜಾಗೃತಿ ಮೂಡಿಸಿದರು. ಈ ವೇಳೆ ಅ ಕಾಲೇಜಿನ ಅಧ್ಯಕ್ಷ ಹೇಮಂತ್ ಕುಮಾರ್, ಕಾರ್ಯದರ್ಶಿ ಎಚ್.ವಿ. ಚೇತನ್, ಪ್ರಾಂಶುಪಾಲ ಚರಣ್ ಕುಮಾರ್ ಹಾಗೂ ಉಪ ಪ್ರಾಂಶುಪಾಲ ಎಚ್.ವಿ.ಮೋಹನ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net