

ನುಗ್ಗೇಹಳ್ಳಿ: ಹೋಬಳಿಯ ಅಕ್ಕನಹಳ್ಳಿ ಕೂಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಸವನಪುರ ಗ್ರಾಮದ ಮಂಜುಳಾ ಬೋರೇಗೌಡ ಹಾಗೂ ಉಪಾಧ್ಯಕ್ಷರಾಗಿ ರತ್ನ ಅವಿರೋಧವಾಗಿ ಶುಕ್ರವಾರ ಆಯ್ಕೆಗೊಂಡರು.
ಪಂಚಾಯಿಯಲ್ಲಿ ಒಟ್ಟು 16 ಜನ ಸದಸ್ಯರಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ 11 ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ಬೋರೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ರತ್ನ ಮತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಹಾಯಕ ಶಿಕ್ಷಣಾಧಿಕಾರಿ ಅನಿಲ್ ಕುಮಾರ್ ಅವಿರೋಧ ಆಯ್ಕೆ ಪ್ರಕಟಿಸಿದರು.
ಸದಸ್ಯರಾದ ರಾಜಕುಮಾರ್, ಉಮೇಶ್, ದಿನೇಶ್, ಸರೋಜಾ, ಶಾಂತಮ್ಮ, ಶಶಿಕಲಾ, ಕೃಷ್ಣಮೂರ್ತಿ, ರಂಗಾಚಾರ್, ರಾಜಮ್ಮ, ಮುಖಂಡರಾದ ಬಿ.ಆರ್.ದೊರೆಸ್ವಾಮಿ, ಬೆಳಗಿಹಳ್ಳಿ ಕೆ.ಪುಟ್ಟಸ್ವಾಮಿ, ಎಂ.ಆರ್.ವಾಸು, ದಾಸಪುರ ವಿಕ್ಟರ್, ಎಸ್.ಜೆ.ವಾಸುದೇವ್, ಎಸ್.ಪಿ.ನವೀನ್ ಕುಮಾರ್, ಎಸ್.ಎಂ.ಮಧು, ಕಿಶೋರ್, ಬಸವನಪುರ ಪ್ರಕಾಶ್, ಅಕ್ಕನಹಳ್ಳಿ ಉಮೇಶ್, ದಯಾನಂದ್, ಎನ್.ಆರ್.ಕೃಪಾಶಂಕರ್, ಎನ್.ಸಿ.ಕುಮಾರ್, ಉದ್ಯಮಿ ಜಗದೀಶ್, ವೆಂಕಟೇಶ್, ಸಂದೀಪ್, ಸುದೀಪ್, ಪಿಡಿಒ ಮರಿಗೌಡ ಇತರರು ಇದ್ದರು.