ಅಧ್ಯಕ್ಷರಾಗಿ ಹೇಮಾವತಿ ಅವಿರೋಧ ಆಯ್ಕೆ

25-07-25--krs2
Published on

ಕೆ.ಆರ್.ಸಾಗರ: ಮಜ್ಜಿಗೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಹೇಮಾವತಿ ಅವಿರೋಧ ಆಯ್ಕೆಯಾಗಿದ್ದಾರೆ.

ಒಟ್ಟು 12 ಸದಸ್ಯರು ಇರುವ ಮಜ್ಜಿಗೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಗಿರಿಜಾ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಹೇಮಾವತಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯೂ ಆದ ಶ್ರೀರಂಗಪಟ್ಟಣ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಯು.ಕೆ ಪಾರ್ವತಿ ಅವಿರೋಧ ಆಯ್ಕೆ ಘೋಷಿಸಿದರು.

ಗ್ರಾಪಂ ಸದಸ್ಯೆ ಗಿರಿಜಾ, ಮುಖಂಡರಾದ ಸಣ್ಣಬೆಟ್ಟೇಗೌಡ, ಬಸವಣ್ಣ, ಪುಟ್ಟೇಗೌಡ, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net