ಅಧ್ಯಕ್ಷರಾಗಿ ಸರೋಜಮ್ಮ ಬಸವರಾಜು ಅವಿರೋಧ ಆಯ್ಕೆ

Oplus_131072
Oplus_131072
Published on

ಹಲಗೂರು: ಗಾಣಾಳು ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸರೋಜಮ್ಮ ಬಸವರಾಜು, ಉಪಾಧ್ಯಕ್ಷರಾಗಿ ಸವಿತಾ ಕಾಳಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಆವರಣದಲ್ಲಿ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಸರೋಜಮ್ಮ ಬಸವರಾಜು, ಸವಿತಾ ಕಾಳಯ್ಯ ಇಬ್ಬರೆ ನಾಮಪತ್ರ ಸಲ್ಲಿಸಿದ ಕಾರಣ ಇವರನ್ನು ಅವಿರೋಧ ಆಯ್ಕೆ ಮಾಡಿ ಚುನಾವಣಾಧಿಕಾರಿ ಘೋಷಿಸಿದರು.

ನಿರ್ದೇಶಕರಾದ ಚಿಕ್ಕಮಣ್ಣಿ, ನಾಗರತ್ನಮ್ಮ, ಇಂದ್ರಮ್ಮ, ಚಿಕ್ಕತಾಯಮ್ಮ, ನಿಂಗಮ್ಮ ಮತ್ತು ಮುಖಂಡರಾದ ಮಾದೇಶ, ಶಿವಕುಮಾರ್, ಚಂದ್ರಕುಮಾರ್, ಕಾರ್ಯದರ್ಶಿ ರೂಪ ಸೇರಿದಂತೆ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net