

ತಿ.ನರಸೀಪುರ: ತಾಲೂಕಿನ ಚಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹನುಮನಾಳು ಮಾದೇಗೌಡ, ಉಪಾಧ್ಯಕ್ಷರಾಗಿ ಎಂ.ಎಸ್.ಜಯರಾಮೇಗೌಡ ಅವಿರೋಧ ಆಯ್ಕೆಯಾದರು.
ಬನ್ನೂರು ಹೊರವಲಯದಲ್ಲಿರುವ ಚಾಮನಹಳ್ಳಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಹನುಮನಾಳು ಮಾದೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ಜಯರಾಮೇಗೌಡ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕೆ.ಸಿ.ರಘು ಅವಿರೋಧ ಆಯ್ಕೆ ಘೋಷಿಸಿದರು. ಸಭೆಗೆ ನಿರ್ದೇಶಕರಾದ ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಗೈರು ಹಾಜರಾಗಿದ್ದರು. 11 ನಿರ್ದೇಶಕರು ಹಾಜರಿದ್ದರು.
ನಿರ್ದೇಶಕರಾದ ಬಿ.ದೇವರಾಜು, ಉಮೇಶ್, ವಿ.ಶಂಕರೇಗೌಡ, ಎಂ.ಸತೀಶ್, ಸಿ.ಪಿ.ವಿದ್ಯಾ, ಗೋಪಾಲ, ಚನ್ನಮಲ್ಲು, ಲಕ್ಷ್ಮಮ್ಮ, ಸಿ.ಎಸ್.ಮಂಜುನಾಥ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶೇಖರ್, ಮುಖಂಡರಾದ ವೈ.ಎಸ್.ರಾಮಸ್ವಾಮಿ, ಸತೀಶ್, ಉಮೇಶ್, ರಂಗಸ್ವಾಮಿ, ಹನುಮನಾಳು ದಯಾನಂದ, ಸಿದ್ದೇಗೌಡ, ಜಯರಾಮ್, ಹೇಮಂತ್, ಶ್ರೀನಿವಾಸ್, ಸುರೇಶ್, ನವೀನ್, ಶಂಕರ ಇದ್ದರು.