

ಬಳ್ಳಾರಿ : ಕರ್ನಾಟಕ ವೈದ್ಯಕೀಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಜಿಲ್ಲೆಯ ಮಕ್ಕಳ ತಜ್ಞ ಡಾ. ವೈ. ಸಿ. ಯೋಗಾನಂದರೆಡ್ಡಿ ಆಯ್ಕೆಯಾಗಿದ್ದಾರೆ. ವೈದ್ಯಕೀಯ ಪರಿಷತ್ತಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಂದ 12 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. ನಾಲ್ಕು ವಿಭಾಗಗಳಿಂದ ನೇಮಕಗೊಂಡ ನಾಮನಿರ್ದೇಶಿತ ನಾಲ್ವರು ಸದಸ್ಯರು ಹಾಗೂ ನಾಲ್ಕು ವಿಭಾಗದ 12 ನಿರ್ದೇಶಕರು ಸೇರಿ ಯೋಗಾನಂದರೆಡ್ಡಿ ಅವರನ್ನು ಅಧ್ಯಕ್ಷರಾನ್ನಾಗಿ ಆಯ್ಕೆ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಮೈಸೂರಿನ ಕ್ಯಾನ್ಸರ್ ತಜ್ಞ ಡಾ.ಕೆ.ವಿ. ರವಿ ಆಯ್ಕೆಯಾಗಿದ್ದಾರೆ. 2024 ರಿಂದ 2029ವರೆಗೆ ಆಡಳಿತ ಅವಧಿಯಿದೆ ಹೊಂದಿದ್ದಾರೆ.
ನಾಲ್ಕು ವಿಭಾಗಗಳ ನಿರ್ದೇಶಕರು : ಕಲಬುರಗಿ ವಿಭಾಗದಿಂದ ಡಾ.ವೈ.ಸಿ. ಯೋಗಾನಂದರೆಡ್ಡಿ, ಡಾ. ಶರಣಬಸಪ್ಪ ಎಸ್ ಕಾರಭಾರಿ, ಡಾ. ಶಾಂತೇಶ್ ಪಾಟೀಲ, ಬೆಳಗಾವಿ ವಿಭಾಗದಿಂದ ಡಾ. ಸುಧೀರ್ ಆರ್ ಜಂಬಗಿ, ಡಾ.ಪವನಕುಮಾರ ಎನ್ ಪಾಟೀಲ, ಡಾ. ಸೊರಗಾಂವಿ ವೆಂಕಟೇಶ ರಾಮಪ್ಪ, ಬೆಂಗಳೂರು ವಿಭಾಗದಿಂದ ಡಾ.ಎನ್.ರವಿ, ಡಾ.ಟಿ.ಎ. ವೀರಭದ್ರಯ್ಯ, ಡಾ. ಆರ್. ರವೀಂದ್ರ, ಮೈಸೂರು ವಿಭಾಗದಿಂದ ಡಾ. ಹೊನ್ನೇಗೌಡ, ಡಾ. ರವಿಕೃಷ್ಣಪ್ಪ ಹಾಗೂ ಡಾ. ಎಚ್.ಎನ್. ರವೀಂದ್ರ ಆಯ್ಕೆಯಾಗಿದ್ದಾರೆ. ನಾಲ್ಕು ವಿಭಾಗಗಳಿಂದ ಡಾ. ಶಿವಾನಂದ ಎಸ್.ಭೀಮಳ್ಳಿ, ಡಾ. ಸಂತೋಷ ಡಿ ಪಾಟೀಲ, ಡಾ.ಚೈತ್ರಾ, ವಿ. ಆನಂದ, ಡಾ. ಡಿ. ಭರತ ಕುಮಾರ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.