

ಅರಸೀಕೆರೆ: ನಗರದ ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಹೊಂದಿಕೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಜಗದೀಶ್ ಹಾಗೂ ಉಪಾಧ್ಯಕ್ಷರಾಗಿ ಎ.ರಂಗಸ್ವಾಮಿ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 14 ಸದಸ್ಯ ಬಲದ ಸಂಘದಲ್ಲಿ ಜಗದೀಶ್ ಹಾಗೂ ರಂಗಸ್ವಾಮಿ ಹೊರತುಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಆಯ್ಕೆಯನ್ನು ಚುನಾವಣಾಧಿಕಾರಿ ದೇವರಾಜ್ ಘೋಷಿಸಿದರು. ನಗರಸಭೆ ಸದಸ್ಯ ಈಶಣ್ಣ, ತಾಪಂ ಮಾಜಿ ಸದಸ್ಯ ಹನುಮೇಗೌಡ, ಮುಖಂಡ ಚಿಕ್ಕೇಗೌಡ, ಕಾರ್ಯದರ್ಶಿ ಮಂಜೇಗೌಡ ಹಾಗೂ ನಿರ್ದೇಶಕರು ಹಾಜರಿದ್ದರು.