ಅಧ್ಯಕ್ಷರಾಗಿ ಚೌದ್ರಿ ಉಪಾಧ್ಯಕ್ಷರಾಗಿ ಬೇಪಾರಿ ಆಯ್ಕೆ

Chowdhury as the President and Bepari as the Vice President
ತಾಳಿಕೋಟೆಯ ದಿ. ಮುಸ್ಲಿಂ ಕೋ-ಆಫ್ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಿ.ಎಲ್. ಚೌದ್ರಿ, ಉಪಾಧ್ಯಕ್ಷ ರಫೀಕ ಬೇಪಾರಿ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.
Published on

ತಾಳಿಕೋಟೆ: ಪಟ್ಟಣದ ದಿ. ಮುಸ್ಲಿಂ ಕೋ-ಆಫ್ ಬ್ಯಾಂಕ್‌ನ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದಾದೇಫೀರ ಚೌದ್ರಿ, ಉಪಾಧ್ಯಕ್ಷರಾಗಿ ರಫೀಕ ಬೇಪಾರಿ ಆಯ್ಕೆಯಾಗಿದರು.

ಅಧ್ಯಕ್ಷ ಸ್ಥಾನಕ್ಕೆ ದಾದೇಫೀರ ಚೌದ್ರಿ ಮತ್ತು ಶಫೀಕ ಇನಾಮದಾರ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ದಾದೇಫೀರ ಚೌದ್ರಿ ಅವರಿಗೆ 7 ಮತಗಳನ್ನು ಪಡೆದರೆ, ಶಫೀಕ್ ಇನಾಮದಾರ ಅವರಿಗೆ 6 ಮತಗಳು ಬಂದವು. ಉಪಾಧ್ಯಕ್ಷ ಸ್ಥಾನಕ್ಕೆ ರಫೀಕ ಬೇಪಾರಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಸೈದುಸಾಬ ಬೇಪಾರಿ ಅವರನ್ನು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಘೋಷಿಸಲಾಯಿತು.

ಚುನಾವಣೆಯಲ್ಲಿ ಸಹಾಯಕ ಅಧಿಕಾರಿಗಳಾಗಿ ಬ್ಯಾಂಕ್ ವ್ಯವಸ್ಥಾಪಕ ಎನ್.ಎ. ಖಾಜಿ, ಶಶಿಕಾಂತ ಮೂಕೀಹಾಳ, ಆಯ್.ಆರ್. ಆರಬೋಳ, ಎಲ್.ಎ. ನಾಗೂರ, ಎ.ಎಚ್. ಢಾಲಾಯತ್ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯ ನಂತರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು. ಮುಖಂಡರಾದ ಮಾಸುಮಸಾಬ ಕೆಂಭಾವಿ, ಮುಸ್ತಫಾ ಚೌದ್ರಿ, ಸಿಕಂದರ ವಠಾರ, ಹಸನಸಾಬ ಮನಗೂಳಿ, ಗಪೂರಸಾಬ ಬೇಪಾರಿ, ಶಬ್ಬೀರ ಲಾಹೋರಿ, ಇಲಿಯಾಸ ಚೌದ್ರಿ, ಮಹೇಬೂಬ ಲಾಹೋರಿ, ಅಜೀಜ ಡೋಣಿ, ಲತೀಫ ಬೀಳಗಿ, ಉಸ್ಮಾನ ಲಾಹೋರಿ, ನಭಿ ಹುಣಶ್ಯಾಳ, ಮುಸಾ ಕೆಂಭಾವಿ, ಹುಸೇನ ಜಮಾದಾರ, ಗೌಸ ನಾಸರ, ಹುಸೇನಸಾಬ ಕೆಂಭಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net