

ಚಿತ್ರದುರ್ಗ: ನಗರಸಭೆ,ಪುರಸಭೆ,ಪಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ಪ್ರಕಟಿಸದ ವಿಳಂಬ ಧೋರಣೆ ಹಾಗೂ ಸದಸ್ಯರ ಅಧಿಕಾರ ಮೊಟಕು ಗೊಳಿಸುವ ಕುತಂತ್ರವನ್ನು ಖಂಡಿಸಿ ಸೆ.30 ರಂದು ನಗರದಲ್ಲಿ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟಿಸಲು,ಬುಧವಾರ ನಗರದ ಪ್ರವಾಸಿ ಮ ಂದಿರದಲ್ಲಿ ನಡೆದ ನಗರಸಭೆ,ಪುರಸಭೆ ಹಾಗೂ ಪಪಂ ಸದಸ್ಯರ ಒಕ್ಕೂಟದ ಸಭೆ ನಿರ್ಧರಿಸಿದೆ.
ಹಿಂದಿನ ಅಧ್ಯಕ್ಷ,ಉಪಾಧ್ಯಕ್ಷರ ಅಧಿಕಾರಾವಧಿ ಕಳೆದ ಏಪ್ರಿಲ್-ಮೇನಲ್ಲಿ ಮುಕ್ತಾಯಗೊಂಡಿದ್ದು,ಹೊಸಬರ ಆಯ್ಕೆ ಆಗಬೇಕಿದೆ. ಆ ದರೆ ರಾಜ್ಯಸರ್ಕಾರ ಮೀಸಲು ನೀತಿ ಪ್ರಕಟಿಸದೆ ಇರುವುದು ಹೊಸಬರ ಆಯ್ಕೆಗೆ ತೊಡಕಾಗಿದೆ. ರಾಜ್ಯಸರ್ಕಾರ ಸದಸ್ಯರ ಹಕ್ಕುಗಳನ್ನು ಹತ್ತಿಕ್ಕುತ್ತಿದೆ. ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಯಾಗದೆ ಸಾಮಾನ್ಯ ಸಭೆಗಳು ಆಗುತ್ತಿಲ್ಲ.
ಇದರಿಂದ ನಾಗರಿಕರು ಮೂಲಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆಂದು ಸಭೆ ಅಸಮಾಧಾನ ವ್ಯಕ್ತಪಡಿಸಿತು. ಅಂದು ಬೆಳಗ್ಗೆ 11ಗಂಟೆಗೆ ಶ್ರೀ ನೀಲಕಂಠೇಶ್ವರ ದೇವಾಲಯದಿಂದ ಡಿಸಿ ಕಚೇರಿವರೆಗೆ ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಸದಸ್ಯರು ಹೆಚ್ಚಿ ನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಒಕ್ಕೂಟದ ಮುಖಂಡರು ಮನವಿ ಮಾಡಿದರು.
ಚಿತ್ರದುರ್ಗ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್,ಸದಸ್ಯರಾದ ನಸ್ರುಲ್ಲಾ,ಶ್ರೀನಿವಾಸ್, ದಾವೂದ್,ಹರೀಶ್,ಜಯಣ್ಣ,ಶಶಿ,ವೆಂಕಟೇಶ್,ಭಾಗ್ಯಮ್ಮ,ತಾರಕೇಶ್ವರಿ,ಮಾಜಿ ಸದಸ್ಯ ಟಿ.ರಮೇಶ್,ಹೊಳಲ್ಕೆರೆ ಪುರಸಭೆಯ ಕೆ.ಸಿ.ರಮೇಶ್,ಜಮೀಲ್,ಜಯಸಿಂಹ, ಹೊಸದುರ್ಗ ಪುರಸಭೆಯ ಶ್ರೀನಿವಾಸ್,ದೊಡ್ಡಯ್ಯ,ಹಿರಿಯೂರು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಜಪ್ಪ,ಸದಸ್ಯ ಸಾದತ್‌ವುಲ್ಲಾ ಮತ್ತಿತರರು ಇದ್ದರು.