ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

1 mlv 1
Published on

ಮಳವಳ್ಳಿ: ತಾಲೂಕಿನ ಕ್ಯಾತೇಗೌಡದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಚಿಕ್ಕಣ್ಣೇಗೌಡ ಅಧ್ಯಕ್ಷರಾಗಿ, ಮಹದೇವಮ್ಮ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.


ಎ.ಎಸ್. ಕೃಷ್ಣ ಹಾಗೂ ಗೋಪಾಲ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆದು, ಅಧ್ಯಕ್ಷ ಸ್ಥಾನಕ್ಕೆ ಚಿಕ್ಕಣ್ಣೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಮಹದೇವಮ್ಮ ತಲಾ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರ ಇಲಾಖೆ ಸಿಡಿಒ ರಾಮಕೃಷ್ಣ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಮುಖಂಡರಾದ ಶೋರೂಂ ಪ್ರಕಾಶ್, ಸತೀಶ್, ಶರತ್, ಮರಿತಿಬ್ಬೇಗೌಡ, ಸುಂದ್ರೇಶ್, ನಾಗೇಶ್, ನಾಗೇಗೌಡ, ಸಿದ್ದೇಗೌಡ ಅಭಿನಂದಿಸಿದರು. ಡೇರಿ ನಿರ್ದೇಶಕರಾದ ನಂಜುಂಡೇಗೌಡ, ಇಂದ್ರಮ್ಮ, ಎಂ.ಕೃಷ್ಣ, ಯೋಗಾನಂದ, ಕಾಳೇಗೌಡ, ದೊಡ್ಡಮಲ್ಲೇಗೌಡ, ಎಂ.ಆರ್.ಸರ್ವೇಶ, ಸಂಘದ ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net