

ಯಾದಗಿರಿ: ಚಿತ್ತಾಪುರ ರಸ್ತೆಯಲ್ಲಿರುವ ಜಿ¯್ಲÁ ಕ್ರೀಡಾಂಗಣ ಪರಿಸ್ಥಿತಿ `ಊಪರ್ ಶೇರವಾನಿ ಅಂದರ್ ಪರೇಶಾನಿ' ಎನ್ನುವಂತಿದೆ. ರಾಜ್ಯದ ಬಹುದೊಡ್ಡ ಜಿಲ್ಲಾ ಕ್ರೀಡಾಂಗಣಗಳಲ್ಲಿ ಒಂದಾಗಿರುವ ಗಿರಿ ಜಿಲ್ಲೆಯ ಈ ಸ್ಟೇಡಿಯಂ ಹಲವು ಸಮಸ್ಯೆಗಳನ್ನು ಹೊತ್ತು ಸರ್ಕಾರದ ದಿವ್ಯ ನಿರ್ಲಕ್ಷÈಕ್ಕೆ ಒಳಗಾಗಿದೆ.
ಕ್ರೀಡಾ ವಸತಿನಿಲಯ ಮಕ್ಕಳು ಈಜುಕೊಳ ಮತ್ತು ಟೆನಿಸ್ ಕಟ್ಟಡದಲ್ಲಿ ಅನಿವಾರ್ಯ ಎಂಬAತೆ ವಾಸವಾಗಿದ್ದಾರೆ. ೪೩ ಪ್ರೌಢಶಾಲಾ ಮಕ್ಕಳು ಇಲ್ಲಿದ್ದು, ಅವರಲ್ಲಿ ೨೦ ಬಾಲಕಿಯರನ್ನು ಟೇಬಲï ಟೆನಿಸ್ ಕಟ್ಟಡ, ೨೩ ಬಾಲಕರನ್ನು ಈಜುಕೊಳ ಕಟ್ಟಡದಲ್ಲಿ ಉಳಿಯಲು ಬಿಡಲಾಗಿದೆ. ನೂತನ ಕಟ್ಟಡ ಕಟ್ಟಿದ್ದರೂ ಉದ್ಘಾಟನೆಯಾಗಿಲ್ಲ ಎಂಬ ಕಾರಣಕ್ಕೆ ಅಭದ್ರತೆಯಲ್ಲಿ ಮಕ್ಕಳ ವಾಸ ಎನ್ನುವಂತಾಗಿದೆ.
ಗಿರಿ ಜಿ¯್ಲೆ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಪ್ರತಿಭೆ ಮೆರೆದು ದೇಶದ ಸಾಧಕರಾಗಲಿ, ಜನರ ಉಪಯೋಗಕ್ಕೆ ಬರಲಿ ಎಂಬ ಉz್ದÉÃಶದಿಂದ ೧೨ ವರ್ಷದ ಹಿಂದೆ ೪೬ ಎಕರೆ ವಿಸ್ತಾರದ ಜಿ¯್ಲÁ ಕ್ರೀಡಾಂಗಣ ಅಸ್ತಿತ್ವಕ್ಕೆ ಬಂದಿದೆ ಹೊರತು, ಆಶಯ ಈಡೇರಿಲ್ಲ. ಈಜುಕೊಳ, ಜಿಮ್, ಆಟದ ಮೈದಾನ, ಅಥ್ಲೆಟಿಕ್ಸ್, ವಾಲಿಬಾಲïಗೆ ಮಾತ್ರ ಸ್ಟೇಡಿಯಂ ಮೀಸಲಾಗಿದೆ. ಸರ್ಕಾರ ಮನಸ್ಸು ಮಾಡಿದರೆ ೨೯ಕ್ಕೂ ಹೆಚ್ಚು ಕ್ರೀಡೆಗಳ ಸೌಲಭ್ಯ ಕಲ್ಪಿಸುವ ಮೂಲಕ ಜಿ¯್ಲÉಯ ಸಾವಿರಾರು ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಲು ಸಾಧ್ಯವಾಗಲಿದೆ.
ಇನ್ನು ಒಳಾಂಗಣ ಕ್ರೀಡಾಂಗಣ ಆಗಬೇಕು. ಚೆಸ್, ಕೇರಂ, ಕರಾಟೆ, ಕ್ರಿಕೆಟ್, ಪುಟ್‌ಬಾಲï, ಹಾಕಿ, ಶೆಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲï, ಲಾನ್ ಟೆನಿಸ್, ಜುಡೋ, ಕುಸ್ತಿಗಾಗಿ ಗರಡಿಮನೆ ಹೀಗೆ ವಿವಿಧ ಆಟಗಳ ವ್ಯವಸ್ಥೆಗೆ ಸಾಕಷ್ಟು ಸ್ಥಳದ ವ್ಯವಸ್ಥೆ ಇದ್ದರೂ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದಂತಿಲ್ಲ.