ಅಧೀಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ

14-6
ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಚೇರಿ ಅಧೀಕ್ಷಕ ಉಮೇಶ ಗಂಗನಹಳ್ಳಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆರ್‌ಟಿಒಗೆ ಮನವಿ ಸಲ್ಲಿಸಿದರು. ಅಪ್ಪಾಸಾಹೇಬ ಬ್ಯಾಳಿ, ಸುದರ್ಶನ ತಮ್ಮನ್ನವರ ಇತರರಿದ್ದರು.
Published on

ಚಿಕ್ಕೋಡಿ, ಬೆಳಗಾವಿ: ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಚೇರಿ ಅಧೀಕ್ಷಕ ಉಮೇಶ ಗಂಗಣಹಳ್ಳಿ ಸಮರ್ಪಕವಾಗಿ ಕಾರ್ಯನಿರ್ವಹಿಸದೆ, ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಸೋಮವಾರ ಆರ್‌ಟಿಒ ವಿಶಾಲ ಜಿ.ಪಿ ಅವರಿಗೆ ಮನವಿ ಸಲ್ಲಿಸಿದರು.

ಗಂಗನಹಳ್ಳಿ ಅವರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹೊಸ ಮತ್ತು ನವೀಕರಣ ಡಿಎಲ್ ಮತ್ತು ವಾಹನಗಳ ನೋಂದಣಿ ಪತ್ರ ಸಮಯಕ್ಕೆ ಸರಿಯಾಗಿ ವಿತರಿಸದೆ ಅವರ ಸುಪರ್ದಿಯಲ್ಲಿಯೇ ಇಟ್ಟುಕೊಂಡು ಸಾರ್ವಜನಿಕರಿಗೆ ಮೂರ‌್ನಾಲ್ಕು ತಿಂಗಳ ನಂತರ ಲಂಚದ ಬೇಡಿಕೆ ಇಡುತ್ತಾರೆ. ಇಲಾಖೆ ನಿಯಮದ ಪ್ರಕಾರ ಅರ್ಜಿದಾರರು ಅಂಚೆ ವೆಚ್ಚವನ್ನು ಚಲನ್ ಮೂಲಕ ಸಂಬಂಧಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ, ಈ ಅಧಿಕಾರಿ ಅರ್ಜಿದಾರರ ಕಡೆಯಿಂದ ಲಂಚಕ್ಕೆ ಕೈ ಒಡ್ಡುತ್ತಾರೆ ಎಂದು ಆರೋಪಿಸಿದರು.

ಅಪ್ಪಾಸಾಹೇಬ ಬ್ಯಾಳಿ, ಸುದರ್ಶನ ತಮ್ಮನ್ನವರ, ರಾವಸಾಹೇಬ ಫಕೀರೆ, ನಂದಕುಮಾರ ದರಬಾರೆ, ರಾಘವೇಂದ್ರ ಸನದಿ, ಮನೋಹರ ಮಾಳಕರಿ, ಅಶೋಕ ಮಾಳಗೆ, ಡಿ.ಎ.ಜಾಧವ, ವಿಜಯ ಮೊಟ್ಟನ್ನವರ, ವಿನೋದ ಚಿತಳೆ, ಬಾಬುರಾವ ಘಟ್ಟಿ, ಶ್ರವಣ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net