ಅಧಿಸೂಚನೆ ಪಾಲಿಸದ ಸಿಮೆಂಟ್ ಕಂಪನಿಗಳು

oppo_2
oppo_2
Published on

ಕಲಬುರಗಿ: ರಾಜ್ಯದ ೧೧ ಪ್ರಮುಖ ಸಿಮೆಂಟ್ ಕಂಪನಿಗಳಲ್ಲಿ ಸರ್ಕಾರದ ಅಧಿಸೂಚನೆ ಪಾಲಿಸುತ್ತಿಲ್ಲ. ಹಲವು ಕೆಲಸಗಳಲ್ಲಿ ಸಾವಿರಾರು ಗುತ್ತಿಗೆ ಕಾರ್ಮಿಕರನ್ನು ಅಕ್ರಮವಾಗಿ ನಿಯೋಜಿಸಲಾಗುತ್ತಿದೆ ಎಂದು ಸಿಮೆಂಟ್ ಕೈಗಾರಿಕೆಗಳ ಕುರಿತು ಕಾರ್ಮಿಕ ಹೋರಾಟಗಾರ ರಮಾಕಾಂತ ಕುಲಕರ್ಣಿ ಆರೋಪಿಸಿದರು.

ಸಿಮೆಂಟ್ ಕೈಗಾರಿಕೆಗಳಲ್ಲಿ ಗುತ್ತಿಗೆ ಕಾರ್ಮಿಕರ ನಿಷೇಧ ಕುರಿತು ಕರ್ನಾಟಕ ಸರ್ಕಾರದ ಅಧಿಸೂಚನೆ ಕಂಪನಿಗಳು ಪಾಲಿಸುತ್ತಿಲ್ಲ. ಸಿಮೆಂಟ್ ಪ್ಯಾಕಿಂಗ್, ಲೋಡಿಂಗ್ ಮತ್ತು ಅನ್ಲೋಡಿಂಗ್ ಕೆಲಸ, ಫಿಲ್ಟರ್ ಬ್ಯಾಗ್ ದುರಸ್ತಿ, ಸಿಮೆಂಟ್ ಪ್ಲಾಂಟ್‌ಗೆ ಸಂಬAಧಿಸಿದ ಕ್ಯಾಂಟೀನ್, ಅತಿಥಿಗೃಹ ಕಾವಲುಗಾರರು, ಉದ್ಯಾನ ನಿರ್ವಹಣೆ ಸೇರಿ ೧೬ ಬಗೆಯ ದೀರ್ಘಕಾಲಿಕ ಕೆಲಸಗಳಲ್ಲಿ ಗುತ್ತಿಗೆಯಾಗಿ ಕಾರ್ಮಿಕರನ್ನು ನಿಯೋಜಿಸುವುದನ್ನು ಸರ್ಕಾರ ನಿಷೇಧಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆದರೆ ರಾಜ್ಯದ ೧೧ ಕಂಪನಿಗಳಲ್ಲಿ ಸುಮಾರು ೧೦ ಸಾವಿರ ಕಾರ್ಮಿಕರು ಗುತ್ತಿಗೆ ಅಡಿ ನಿಷೇಧಿತ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಿ, ಬಹುತೇಕ ಕಾರ್ಖಾನೆಗಳಲ್ಲಿ ಅಕ್ರಮವಾಗಿ ಗುತ್ತಿಗೆ ಕಾರ್ಮಿಕರನ್ನು ನಿಯೋಜಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಇಲಾಖೆಯ ಸಮರ್ಥ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದು, ನ್ಯಾಯ ದೊರೆಯುವವರೆಗೆ ಹೋರಾಟ ನಿರಂತರವಾಗಿ ಇರಲಿದೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಬಿ.ಎಂ.ರಾವೂರ ಇತರರಿದ್ದರು.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net