ಅಧಿಕಾರಿಗಳೇ ಸಮನ್ವಯದಿಂದ ಕೆಲಸ ಮಾಡಿ

3
ಸವದತ್ತಿ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕಾಧಿಕಾರಿಗಳ ಸಭೆಯಲ್ಲಿ ಶಾಸಕ ವಿಶ್ವಾಸ ವೆದ್ಯ ಮಾತನಾಡಿದರು. ಮಲ್ಲಿಕಾರ್ಜುನ ಹೆಗ್ಗಣ್ಣವರ, ಧರ್ಮಾಕರ ಧರ್ಮಟ್ಟಿ, ಎಂ.ಎನ್​. ಮಠದ, ಮೋಹನ ದಂಡಿನ ಇತರರು ಇದ್ದರು.
Published on

ಸವದತ್ತಿ: ಸತತ ಮಳೆ ಪರಿಣಾಮ ಮಲಪ್ರಭಾ ನದಿ ಗರಿಷ್ಠ ಮಟ್ಟದಲ್ಲಿ ಹರಿಯುತ್ತಿದ್ದು, ಹಂತ ಹಂತವಾಗಿ ನೀರು ಬಿಡಲಾಗುವುದು. ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ವಿಶ್ವಾಸ ವೆದ್ಯ ಸೂಚಿಸಿದರು.

ಇಲ್ಲಿನ ತಾಪಂ ಸಭಾಭವನದಲ್ಲಿ ಶನಿವಾರ ಪ್ರವಾಹ ಉಂಟಾಗುವ ಸಾಧ್ಯತೆ ಮತ್ತು ಪ್ರವಾಹ ಸನ್ನದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ನಿಯೋಜಿತ ನೋಡಲ್​ ಅಧಿಕಾರಿ ತಾಲೂಕಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ಎದುರಿಸಬೇಕು. ಹಂತ ಹಂತವಾಗಿ ನೀರು ಹರಿಸಲು ಕ್ರಮ ಕೆಗೊಳ್ಳಬೇಕು. ಅಗ್ನಿಶಾಮಕ, ಪೊಲೀಸ್​ ಇಲಾಖೆ ಸೇರಿ ವಿವಿಧ ಇಲಾಖೆಗಳ ವಿವಿಧ ಹಂತದ ಅಧಿಕಾರಿಗಳು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಎಲ್ಲ ಸಾಧನ ಸಲಕರಣೆಗಳು, ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಹೆಸ್ಕಾಂ ಅಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರಿಗೆ ತಣ ಸ್ಪಂದಿಸಬೇಕು. ಪಿಡಿಒಗಳು ಮುನ್ನೆಚ್ಚರಿಕೆಯಾಗಿ ಡಂಗುರ ಮೂಲಕ ಎಚ್ಚರಿಸುತ್ತಿರಬೇಕು. ಆಸ್ಪತ್ರೆಗಳಲ್ಲಿ ಔಷಧ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮ ಕೆಗೊಳ್ಳಬೇಕು. ಕುಡಿಯುವ ನೀರಿಗೆ ಕಲುಷಿತ ನೀರು ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ತಾಲೂಕಿನಲ್ಲಿ ಮುಂಜಾಗ್ರತೆ ಕ್ರಮವಾಗಿ 11 ಕಾಳಜಿ ಕೇಂದ್ರ ತೆರೆದು, ಜಾನುವಾರುಗಳಿಗೂ ಗೋಶಾಲೆಗೆ ಸ್ಥಳ ನಿಗದಿಪಡಿಸಲಾಗಿದೆ. ಸುಸಜ್ಜಿತ 2 ಬಾಡಿಗೆ ಬೋಟ್​ ಇವೆ ಎಂದರು. ಪಿಐ ಧರ್ಮಾಕರ ಧರ್ಮಟ್ಟಿ, ಯರಗಟ್ಟಿ ತಹಸೀಲ್ದಾರ್​ ಎಂ.ಎನ್​. ಮಠದ, ಬಿಇಒ ಮೋಹನ ದಂಡಿನ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net