ಅಧಿಕಾರಿಗಳು ಅಹಂ ಬಿಟ್ಟು ಕಾರ್ಯ ನಿರ್ವಹಿಸಲಿ

Let the officers leave their ego and work
Published on

ಸವಣೂರ: ಅಧಿಕಾರಿಗಳು ಅಹಂ ಬಿಟ್ಟು ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಗಾಂಧೀಜಿ ಅವರು ಕಂಡ ಕನಸು ನನಸಾಗಲು ಸಾಧ್ಯವಾಗಲಿದೆ ಎಂದು ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್​ ಹೇಳಿದರು.

ಪಟ್ಟಣದ ತಹಸೀಲ್ದಾರ್​ ಕಚೇರಿ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್​ ಬಹಾದೂರ್​ ಶಾಸ್ತ್ರೀ ಅವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಚ್ಛ ಭಾರತ ಮಿಷನ್​ನಡಿ ಸೆ. 17ರಿಂದ ಅ. 1ರವರೆಗೆ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ ಕೆಲ ಅಹಂ ಹೊಂದಿದ ಅಧಿಕಾರಿಗಳಿಂದಾಗಿ ವಿಲವಾಗಿದೆ ಎನ್ನುವ ಭಾವನೆ ಮೂಡಿದೆ. ಎಂತಹ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೇ ಆಗಲಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸ್ವಚ್ಛತೆಗೆ ಮುಂದಾದಲ್ಲಿ ಮಾತ್ರ ಮಹಾತ್ಮ ಗಾಂಧೀಜಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಂಡ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಲಿದೆ. ಆದ್ದರಿಂದ, ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ತಹಸೀಲ್ದಾರ್​ ಭರತರಾಜ್​ ಕೆ.ಎನ್​. ಅಧ್ಯಕ್ಷತೆ ವಹಿಸಿದ್ದರು. ಗ್ರೇಡ್​ 2 ತಹಸೀಲ್ದಾರ್​ ಗಣೇಶ ಸವಣೂರ, ಬಿಇಒ ಎಂ.ಎಫ್​.ಬಾಕಿರ್, ಎಇ ಹಾಜಿಮಲಂಗ್​ ಚಪ್ಪರಬಂದ್​, ಕರವೇ ತಾಲೂಕು ನಿಕಟಪೂರ್ವ ಅಧ್ಯಕ್ಷ ಪರಶುರಾಮ ಈಳಗೇರ, ಕಂದಾಯ ಇಲಾಖೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net